ಮಡಿಕೇರಿ ಸೆ.27 : ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ವತಿಯಿಂದ 19 ವರ್ಷದೊಳಗಿನವರ ಮಹಿಳಾ ಏಕದಿನ ಕ್ರಿಕೆಟ್ ಪಂದ್ಯಾವಳಿಯ ಕರ್ನಾಟಕ ರಾಜ್ಯ ತಂಡಕ್ಕೆ ಜಿಲ್ಲೆಯ ಬಾಲಕಿ ಶ್ರೀನಿತಿ ಪಿ.ರೈ ಆಯ್ಕೆಯಾಗಿದ್ದಾಳೆ.
ಬೆಂಗಳೂರಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಎಡಗೈ ಸ್ಪಿನ್ನರ್ ಆಗಿರುವ ಶ್ರೀನಿತಿ ಆಯ್ಕೆಯಾಗಿದ್ದಾಳೆ. ಮುಂಬರುವ ಅಕ್ಟೋಬರ್ 8 ರಿಂದ 16ರ ವರೆಗೆ ಗುಹವಾಟಿಯಲ್ಲಿ ಪಂದ್ಯಾವಳಿ ನಡೆಯಲಿದ್ದು, ನಿಕಿ ಪ್ರಸಾದ್ ನಾಯಕಿಯಾಗಿರುವ ಕರ್ನಾಟಕ ತಂಡದಲ್ಲಿ ಶ್ರೀನಿತಿ ಸ್ಥಾನ ಪಡೆದಿದ್ದಾಳೆ.
ಬೆಂಗಳೂರಿನ ಅಕ್ಷಯನಗರದಲ್ಲಿರುವ ಸೆಂಟ್ ಆ್ಯನ್ಸ್ ಐಸಿಎಸ್‍ಸಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಶ್ರೀನಿತಿ ಜಿಲ್ಲೆಯ ಮಡಿಕೇರಿ ತಾಲೂಕಿನ ಮಕ್ಕಂದೂರುವಿನ ಹೆಮ್ಮೆತ್ತಾಳು ಗ್ರಾಮ ನಿವಾಸಿ ಬಿ.ಜಿ.ಪ್ರಕಾಶ್ ರೈ ಹಾಗೂ ವಿನುತಾ ರೈ ದಂಪತಿ ಪುತ್ರಿ.









