ಮಡಿಕೇರಿ ಸೆ.27 : ಸಿವಿಲ್ ಡೆಫೆನ್ಸ್‍ನಲ್ಲಿ ಡಿವಿಶನ್ ವಾರ್ಡನ್ ಆಗಿ ಸೇವೆಯಲ್ಲಿರುವ ಜಿಲ್ಲೆಯ ಡಾ.ಕುಟ್ಟಂಡ ಸುನಿತಾ ಸಜನ್ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
2022ನೇ ಸಾಲಿನಲ್ಲಿನ ಉತ್ತಮ ಸೇವೆಗಾಗಿ ಪದಕ ಲಭಿಸಿದ್ದು, ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯದ ಗೃಹ ಸಚಿವ ಪರಮೇಶ್ವರ್ ಪದಕ ಪ್ರದಾನ ಮಾಡಿದರು.
ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಜಿಲ್ಲೆಯ ಅಮ್ಮತ್ತಿ ಕಾರ್ಮಾಡುವಿನ ಕುಟ್ಟಂಡ ಸಜನ್ (ತಮನೆ ಐತಿಚಂಡ, ಕರಡ) ಅವರ ಪತ್ನಿ.









