ಮಡಿಕೇರಿ ಸೆ.27 : ವಿಶ್ವಕರ್ಮ ಕುಲಶಾಸ್ತ್ರ ಅಧ್ಯಯನ ನಡೆಸಲು ಸೆ.30 ರಂದು ವಿಶ್ವಕರ್ಮ ಕುಲಶಾಸ್ತ್ರ ಅಧ್ಯಯನ ತಂಡ ಮಡಿಕೇರಿಗೆ ಭೇಟಿ ನೀಡಲಿದ್ದು, ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಗ್ರ ಮಾಹಿತಿಯನ್ನು ನೀಡುವಂತೆ ಕೊಡಗು ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಕಾರ್ಯದರ್ಶಿ ಬಿ.ಬಿ.ನಾಗರಾಜು ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಕುಲಶಾಸ್ತ್ರ ಅಧ್ಯಯನ ನಡೆಸಲು ಸರ್ಕಾರ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೂಚಿಸಿದ್ದು, ಡಾ.ನಂಜುಂಡ, ಡಾ.ಮಹದೇವ ಹಾಗೂ ಡಾ.ಕೃಷ್ಣಮೂರ್ತಿ ನೇತೃತ್ವದ ತಂಡ ಈ ಕಾರ್ಯ ನಡೆಸಲಿದೆ ಎಂದರು.
ಸೆ.30 ರಂದು ತಂಡ ಮಡಿಕೇರಿಗೆ ಭೇಟಿ ನೀಡಲಿದ್ದು, ನಗರದ ಚೈನ್‍ಗೇಟ್ ಬಳಿ ಇರುವ ವಿಶ್ವಕರ್ಮ ಭವನದಲ್ಲಿ ಬೆಳಗ್ಗೆ 10.30 ಗಂಟೆಗೆ ಕೊಡಗಿನ ಎಲ್ಲಾ ವಿಶ್ವಕರ್ಮರ ಸಭೆ ಕರೆಯಲಾಗಿದೆ. ಆದ್ದರಿಂದ 2ಎ ಅಡಿಯಲ್ಲಿ ಕೊಡಗಿನಲ್ಲಿ ವಾಸವಾಗಿರುವ ಎಲ್ಲಾ ಊರಿನ ಮುಖಂಡರು, ಶ್ರೀ ಕಾಳಿಕಾಂಬ ದೇವಾಲಯದ ಅಧ್ಯಕ್ಷರು, ಎಲ್ಲಾ ಸಂಘ ಸಂಸ್ಥೆಗಳ ಮುಖಂಡರು ಹಾಜರಿರಬೇಕು. ಕಸುಬು, ಆಚಾರ, ವಿಚಾರ, ನಡೆನುಡಿ ಭಾಷೆ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸರಕಾರಿ ನೌಕರರ ವಿವರ, ಇನ್ನಿತರ ಸಮಗ್ರ ಮಾಹಿತಿಯನ್ನು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ವಾಸವಾಗಿರುವ ಎಲ್ಲಾ ಮುಖಂಡರು ಹಾಗೂ ಆಸಕ್ತರು 2ಎ ವಿಶ್ವಕರ್ಮ ಜಾತಿ ದೃಢೀಕರಣ ಪತ್ರದೊಂದಿಗೆ ಹಾಜರಾಗುವಂತೆ ಮನವಿ ಮಾಡಿದರು.
ಇದೇ ಮೊದಲ ಬಾರಿಗೆ ಅಧ್ಯಯನ ನಡೆಯುತ್ತಿದ್ದು, ವಿಡಿಯೋ ಮತ್ತು ಲಿಖಿತ ರೂಪದಲ್ಲಿ ಮಾಹಿತಿ ದಾಖಲು ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು 35 ಸಾವಿರ ಸಮುದಾಯ ಬಾಂಧವರಿದ್ದು, ಕುಟುಂಬದ ಮಾಹಿತಿ ನೀಡಲು ಅರ್ಜಿ ನೀಡಲಾಗಿದೆ ಎಂದು ನಾಗರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಜಗದೀಶ್ ಆಚಾರ್ಯ, ಸಮಾಜದ ಮುಖಂಡರಾದ ಬಿ.ಸಿ.ಅಶೋಕ ಆಚಾರ್ಯ, ಎ.ಎ.ರಮೇಶ ಆಚಾರ್ಯ, ಎ.ಎಸ್.ಪ್ರಕಾಶ್ ಆಚಾರ್ಯ ಹಾಗೂ ಎಸ್.ವಿ.ಸುರೇಶ್ ಆಚಾರ್ಯ ಉಪಸ್ಥಿತರಿದ್ದರು.
Breaking News
- *ಬಾಳುಗೋಡುವಿನಲ್ಲಿ ಕೊಡವ ನಮ್ಮೆ ಉದ್ಘಾಟನೆ*
- *ಸುಂಟಿಕೊಪ್ಪ : ಸಂತಮೇರಿ ಆಂಗ್ಲ ಮಾಧ್ಯಮ ಶಾಲೆಯ ಎನ್ಸಿಸಿ ಕೆಡೆಟ್ಗಳಿಂದ ಸ್ವಚ್ಛತಾ ಶ್ರಮದಾನ*
- *ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಗೆ ದೇವು ಆಯ್ಕೆ*
- *ಕೊಡಗು ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆ*
- *ವಿರಾಜಪೇಟೆ : ನೂತನ ರಸ್ತೆ ಕಾಮಗಾರಿಗೆ ಚಾಲನೆ*
- *ಅಪ್ಪಂಗಳ ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆಯಲ್ಲಿ ಬೆಳೆಗಾರರಿಗೆ ಕಾಳುಮೆಣಸಿನ ತರಬೇತಿ ಕಾರ್ಯಕ್ರಮ*
- *ಮಡಿಕೇರಿ ಆಟೋ ಮಾಲೀಕ-ಚಾಲಕರ ಸಂಘದ ಕುಂದು ಕೊರತೆ ಸಭೆ*
- *ಲಾರಿ ಡಿಕ್ಕಿಯಾಗಿ ಬಾಲಕಿ ಸಾವು*
- *ಅದವಿಯಾಗೆ ಅಭಿನಂದನೆ*
- *ನಿಧನ ಸುದ್ದಿ*