ಮಡಿಕೇರಿ ಫೆ.28 : ಈದ್ ಮಿಲಾದ್ ಅಂಗವಾಗಿ ಮಡಿಕೇರಿಯ ಬದ್ರಿಯಾ ಜಮಾಅತ್ ಆಶ್ರಯದಲ್ಲಿ ನಗರದಲ್ಲಿ ಬೃಹತ್ ಮಿಲಾದ್ ರ‍್ಯಾಲಿ ನಡೆಯಿತು.
ನಗರದ ಗದ್ದುಗೆ ಬಳಿಯಿಂದ ಆರಂಭಗೊಂಡ ಜಾಥಾ ಕಾವೇರಿ ಹಾಲ್ ನಲ್ಲಿ ಮುಕ್ತಾಯಗೊಂಡಿತು.
ಮೆರವಣಿಗೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಮಂದಿ ಭಾಗವಹಿಸಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಸಂದೇಶ ಸಾರಿದರು.









