ಮಡಿಕೇರಿ ಸೆ.28 : ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ನಡೆಸುತ್ತಿರುವ ಎರಡನೇ ಹಂತದ 2ನೇ ದಿನದ ಪಾದಯಾತ್ರೆ ಪಾಂಡಾನೆ ನಾಡ್ ಮಂದ್, ಕಾಣತ್ತ್ ಮಂದ್ (ಮೂರ್ನಾಡ್-ಐಕೊಳ) ನಲ್ಲಿ ನಡೆಯಿತು.
ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕೊಡವ ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಿಎನ್ ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಕೊಡವರ ಪರವಾದ ಹಕ್ಕೊತ್ತಾಯಗಳ ಕುರಿತು ಪ್ರತಿಪಾದಿಸಿದರು.
ಜಿಲ್ಲೆಯ ಎಲ್ಲಾ ಕಡೆ ಪಾದಯಾತ್ರೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಎಲ್ಲರೂ ಒಗ್ಗಟ್ಟಿನಿಂದ ಶಾಂತಿಯುತ ಹೋರಾಟದಲ್ಲಿ ತೊಡಗಿಸಿಕೊಂಡರೆ ನ್ಯಾಯಯುತ ಬೇಡಿಕೆಗಳು ಈಡೇರಲಿವೆ. ಎರಡು ಹಂತಗಳ ಪಾದಯಾತ್ರೆ ಪೂರ್ಣಗೊಳ್ಳುತ್ತಿದ್ದು, ಉಳಿದಿರುವ ಮೂರು ಹಂತಗಳ ಪಾದಯಾತ್ರೆಯಲ್ಲಿ ಸರ್ವ ಕೊಡವರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು, ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸಬೇಕು, ಕೊಡವ ಜನಾಂಗದ ಸಮಗ್ರ ಕುಲಶಾಸ್ತ್ರ ಅಧ್ಯಯನ ಆರಂಭಿಸಬೇಕು, ಕೊಡವ ಕಸ್ಟಮರಿ ಜನಾಂಗೀಯ ‘ಸಂಸ್ಕಾರ ಗನ್’ ಹಕ್ಕುಗಳನ್ನು ಸಿಖ್ಖರ “ಕಿರ್ಪಾನ್” ಗೆ ಸಮಾನವಾಗಿ ನಮ್ಮ ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಕೊಡವರ “ಧಾರ್ಮಿಕ ಸಂಸ್ಕಾರ”ವೆಂದು ರಕ್ಷಿಸಬೇಕು, ಮಾತೃ ಭಾಷೆ ಕೊಡವ ತಕ್ಕ್ ಅನ್ನು 8ನೇ ಶೆಡ್ಯೂಲ್‍ಗೆ ಸೇರಿಸಬೇಕು. ಸಂವಿಧಾನದ 347, 350, 350ಎ ಮತ್ತು 350ಬಿ ವಿಧಿಗಳ ಅಡಿಯಲ್ಲಿ ಪಠ್ಯಕ್ರಮ ಮತ್ತು ಆಡಳಿತದಲ್ಲಿ ಕೊಡವ ತಕ್ಕ್ ಅನ್ನು ಪರಿಚಯಿಸಬೇಕು. ಕೊಡವ ತಕ್ಕ್ ಅನ್ನು ರಾಜ್ಯದ 3ನೇ ಆಡಳಿತ ಭಾಷೆಯನ್ನಾಗಿ ಪರಿಗಣಿಸಬೇಕು, ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕøತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಜಾನಪದ ಪರಂಪರೆಯನ್ನು ಜೀವಂತಗೊಳಿಸಲು, ವಿಶ್ವ ಕೊಡವಾಲಜಿ (ಕೊಡವ ಶಾಸ್ತ್ರದ ಜಾಗತಿಕ ಸಂಶೋಧನಾ ಅಧ್ಯಯನ ಕೇಂದ್ರ) ಸಂಶೋಧನಾ ಕೇಂದ್ರ ಮತ್ತು ಕೊಡವ ಸುಧಾರಿತ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಸರ್ಕಾರವು ನಮಗೆ ಭೂಮಿಯನ್ನು ನೀಡಬೇಕು. ಜೀವನದಿ ಕಾವೇರಿಗೆ “ಕಾನೂನು ವ್ಯಕ್ತಿ ಸ್ಥಿತಿಯೊಂದಿಗೆ ಜೀವಂತ ಘಟಕವನ್ನು ಸ್ಥಾಪಿಸಬೇಕು ಸೇರಿದಂತೆ ಒಂಭತ್ತು ಪ್ರಮುಖಗಳ ಬೇಡಿಕೆಗಳ ಬಗ್ಗೆ ನಾಚಪ್ಪ ವಿವರಿಸಿದರು.
ಪುದಿಯೊಕ್ಕಡ ಕಾಶಿ, ಬಡುವಂಡ ವಿಜಯ, ಪುದಿಯೊಕ್ಕಡ ಪೃಥ್ವಿ, ಅವರೆಮಾಡಂಡ ದೇವಮ್ಮಾಜಿ, ಪುದಿಯೊಕ್ಕಡ ರಮ್ಯ, ಮಾದೆಯಂಡ ರಶ್ಮಿ ಪೆಮ್ಮಯ್ಯ, ಪಳಂಗಂಡ ರೇಖಾ, ಚೋಳಪಂಡ ಜ್ಯೋತಿ ನಾಣಯ್ಯ, ಎಂ.ಎ.ಬೊಳ್ಳಿಯಪ್ಪ, ದೇವಯ್ಯ ಎನ್.ಪಿ.ಸುಬ್ಬಯ್ಯ, ಚಂಬಂಡ ಜನತ್, ಮುಕ್ಕಾಟಿರ ಪ್ರವೀಣ್, ಪುದಿಯೊಕ್ಕಡ ಹರೀಶ್, ಪುದಿಯೊಕ್ಕಡ ಮಧು, ಪುದಿಯೊಕ್ಕಡ ಉದಯ, ಪಳಂಗಂಡ ಪ್ರಕಾಶ್, ಮುಂದಂಡ ಪವಿ, ಅಮ್ಮಾಟಂಡ ಮನು, ಅಮ್ಮಾಟಂಡ ಗೋಪಾಲ್, ಪುದಿಯೊಕ್ಕಡ ಬೋಪಣ್ಣ, ಅವರೆಮಾಡಂಡ ಕುಶಾಲಪ್ಪ, ಕೋಟೆರ ಮುತ್ತಣ್ಣ, ಚೊಟ್ಟೇರ ಮಾದಪ್ಪ, ಮುಂಡಂಡ ಭವನ, ನೆರವಂಡ ಗಿರೀಶ್, ಅವರೆಮಾಡಂಡ ಚೆಂಗಪ್ಪ, ಬಾರಿಯಂಡ ತಮ್ಮಯ್ಯ, ಬಾರಿಯಂಡ ಸುಬ್ರಮಣಿ, ಕೋಟೆರ ಹರೀಶ್, ದೇವಂದಿರ ಕೆ.ಧನು, ಮುಕ್ಕಾಟಿರ ಬೆಳ್ಯಪ್ಪ, ಬಾರಿಯಂಡ ಗಗನ್, ಬಾರಿಯಂಡ ಕಿಶನ್, ಮಂಡಿರ ಮನೋಜ್, ಕಂಬೀರಂಡ ಗೌತಮ್, ಬಾರಿಯಂಡ ಸೂರಿ, ನೆರವಂಡ ಅನೂಪ್, ಪಳಂಗಂಡ ಮೊಣ್ಣಪ್ಪ, ಪಳಂಗಂಡ ಈಶ್ವರ, ಚೇನಂಡ ಅಯ್ಯಣ್ಣ, ಕ್ಯಾತಂಡ ರಂಜು, ಪುದಿಯೊಕ್ಕಡ ಮಾದಪ್ಪ, ಮಾದೆಯಂಡ ದಾದಾ, ಪಳಂಗಂಡ ಗಣೇಶ್ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಕೊಡವ ಲ್ಯಾಂಡ್ ಪರ ಘೋಷಣೆಗಳನ್ನು ಕೂಗಿದರು.
Breaking News
- *ಕೊಡಗು : ಸಹಕಾರ ಸಂಘಗಳ ಸುಸ್ಥಿರತೆಗೆ ಎಲ್ಲರೂ ಶ್ರಮಿಸಿ : ಕೆ.ಎನ್.ರಾಜಣ್ಣ ಸಲಹೆ*
- *ಮಡಿಕೇರಿಯಲ್ಲಿ ಪೌರಕಾರ್ಮಿಕರ ದಿನಾಚರಣೆ : ಪೌರಕಾರ್ಮಿಕರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ : ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಗೌರವ : ಕಿಡಿಗೇಡಿಯನ್ನು ಬಂಧಿಸಲು ನಾಪೋಕ್ಲು ಕೊಡವ ಸಮಾಜ ಒತ್ತಾಯ*
- *ಇಂದಿರಾ ನಗರ : ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಪಮಾನ : ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಜಿಲ್ಲಾ ಬಿಜೆಪಿಯಿಂದ ಎಸ್ಪಿಗೆ ದೂರು*
- *ಮಡಿಕೇರಿಯಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ*
- *ಜಿಲ್ಲಾ ಮಟ್ಟದ ಯುವಜನೋತ್ಸವ : ಹೆಸರು ನೋಂದಾಯಿಸಿಕೊಳ್ಳಲು ನ.28 ಕೊನೆ ದಿನ*
- *ನ.26 ರಂದು ಸಿಎನ್ಸಿಯಿಂದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ನ.24 ರಂದು ಕೊಡಗು ಜಿಲ್ಲಾ ಕಿವುಡರ ಸಂಘದ ಸಭೆ*