ಮಡಿಕೇರಿ ಸೆ.28 : ಮೈಸೂರಿನ ಅರಮನೆ ಆವರಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ನಡೆದ ಜಾಥಾ ಕಾಯ೯ಕ್ರಮದಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿ ಕೊಡವ ಕೂಟಾಳಿಯಡ ಕೂಟದ ಸದಸ್ಯರು ಭಾಗವಹಿಸಿದ್ದರು. ಅರಮನೆ ಮೈದಾನದಿಂದ ಬನ್ನಿ ಮಂಟಪದವರೆಗೆ ನಡೆದ ಈ ಮೆರವಣಿಗೆಯಲ್ಲಿ ಕೊಡಗಿನ ಕೊಡವ ಪಡೆಯಾಳಿಗಳು ಎನ್ನುವ ಪರಿಕಲ್ಪನೆಯಲ್ಲಿ ಕೊಡಗಿನ ಸಂಸ್ಕೃತಿ ಯನ್ನು ಪ್ರತಿಬಿಂಬಿಸುವ ತಳಿಯತಕ್ಕಿ ದೀಪ ಹಿಡಿದು, ದುಡಿ ಕೊಟ್ಟ್ ಪಾಟ್, ವಾಲಗತಾಟ್,ನ ಜೊತೆಗೆ ಮತ್ತು ಕೊಡವ ಸಂಸ್ಕೃತಿಯ ಅಂಗವಾದ ಕೋವಿ, ಒಡಿಕತ್ತಿ, ಬಿಲ್ಲು, ಬಾಣ,ಬಜಿ೯ ಹಿಡಿದು ಜಾಥಾ ನಡೆಯಿತು. ಕೊಡವ ಕೂಟಾಳಿಯಡ ಕೂಟದ ಅಧ್ಯಕ್ಷರಾದ ಚಂಗುಲಂಡ ಸೂರಜ್, ಗೌರವ ಅಧ್ಯಕ್ಷೆ ಚಿಮ್ಮಚಿರ ಪವಿತ ರಜನ್ ಕಾಯ೯ದಶಿ೯ ಚೆಟ್ಟೋಳಿರ ಶರತ್ ಸೋಮಣ್ಣ, ಖಜಾಂಚಿ ಕಬ್ಬಚ್ಚಿರ ರಶ್ಮಿಕಾಯ೯ಪ್ಪ ಸಹ ಕಾರ್ಯದರ್ಶಿ ನೂರೇರ ಸರಿತ ಉತ್ತಯ್ಯ, ನಿರ್ದೇಶಕ ಕಾಳಮಂಡ ರಾಬಿನ್ ಕರ್ತುರ ರನ್ನು ಪೆಮ್ಮಯ್ಯ, ಸದಸ್ಯರಾದ ಕೊಟ್ಟಂಗಡ ಕವಿತಾ ವಾಸುದೇವ್, ಬೊಜ್ಜಂಗಡ ಭವ್ಯ, ನಂಬುಡುಮಾಡ ದಿಲನ್ ಅಚ್ಚಯ್ಯ,ನೆಲ್ಲಚಂಡ ದಿಲನ್ ಅಯ್ಯಪ್ಪ, ನಂಬುಡುಮಾಡ ರೀತು ಅಚ್ಚಯ್ಯ, ಚಂಗುಲಂಡ ಸ್ವಪ್ನ ಸೂರಜ್ ಮುರುವಂಡ ಸಾವನ್, ತೀತಿರ ಬಿದ್ದಪ್ಪ, ಅಳಮೇಂಗಡ ಸೋಮಣ್ಣ,ಚೇಂದಿರ ಅಭಿನ್,ಬೂವಕಂಡ ಅಪ್ಪಚ್ಚು, ಮಾಚಂಗಡ ಸಚಿನ್,ಅಮ್ಮೇಕಂಡ ಯಜ್ಞ ಸುಬ್ರಮಣಿ, ಭಾಗವಹಿಸಿದ್ದರು.










