ನಾಪೋಕ್ಲು ಸೆ.29 : ಪಾರಾಣೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಯ 2023- 24ರ 5 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಅಪ್ಪನೆರವಂಡ ಎಂ.ಪೂವಯ್ಯ, ಉಪಾಧ್ಯಕ್ಷರಾಗಿ ನಾಯಕಂಡ ಸಿ.ಚಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಆಡಳಿತ ಮಂಡಳಿಗೆ 13 ಸ್ಥಾನಗಳಿಗೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿ ಪೆಬ್ಬಾಟಂಡ ಎ.ಪೆಮ್ಮಯ್ಯ, ಬೊಳ್ಳಚೆಟ್ಟೀರ ಎಂ.ಸುರೇಶ್, ದೇವಜನ ಕೆ.ಪಳಂಗಪ್ಪ, ಬಿದ್ದಂಡ ಎ.ಪೆಮ್ಮಯ್ಯ,ನಾಯಕಂಡ ಟಿ. ಮುತ್ತಪ್ಪ, ಅಂಗೀರ ಎಂ.ಮಾದಪ್ಪ,ಬಲ್ಯಾಟಂಡ ಜಿ.ಕುಟ್ಟಯ್ಯ, ಅಪ್ಪನೆರವಂಡ ಎಂ.ನಯನ, ಮೇಡತನ ಎಸ್ ರಶ್ಮಿ ,ಎಚ್.ಎಸ್ ರಾಜು ಹಾಗೂ ವೈ. ಬಿ ಬಸಪ್ಪ ನಿರ್ದೇಶಕರಾಗಿ ಆಯ್ಕೆಯಾಗಿರುತ್ತಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ವರದಿ : ದುಗ್ಗಳ ಸದಾನಂದ.








