ನಾಪೋಕ್ಲು ಸೆ.29 : ನಾಪೋಕ್ಲು ಲಯನ್ಸ್ ಮತ್ತು ಲಿಯೋ ಸಂಸ್ಥೆಗೆ ಪ್ರಾಂತೀಯ ಅಧ್ಯಕ್ಷ ಭೇಟಿ ಸಮಾರಂಭ ನಡೆಯಿತು.
ನಾಪೋಕ್ಲು ಕೊಡವ ಸಮಾಜದಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತ ಉಪ ಪ್ರಾಂಶುಪಾಲೆ ಪಿ.ಕೆ ನಳಿನಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ, ಮಾತನಾಡಿದ ಪಿ.ಕೆ.ನಳಿನಿ ಶಾಲೆಯಲ್ಲಿ ಶಿಕ್ಷಣವೇ ಮುಖ್ಯ ಅಲ್ಲ ಮಕ್ಕಳಿಗೆ ಸಂಬಂಧಗಳು, ಹಣದ ಮೌಲ್ಯ, ಸಮಯಪ್ರಜ್ಞೆ ಇದರ ಬಗ್ಗೆ ಶಿಕ್ಷಕರು ತಿಳಿಯಪಡಿಸಬೇಕು ಎಂದರು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ನವೀನ್ ಅಂಬೆಕಲ್ ಎಂ ಜೆ ಎಫ್ ಸಂಘದ ಉದ್ದೇಶಗಳ
ಬಗ್ಗೆ ಮಾತನಾಡಿದರು.
ನಾಪೋಕ್ಲು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಕನ್ನಂಬಿರ ಸುದಿ ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಲಿಯೋ ಸಂಸ್ಥೆಯ ಉಪಾಧ್ಯಕ್ಷ ರೋಹನ್ ಮಾಚಯ್ಯ, ಪ್ರಾಂತೀಯ ಪ್ರಥಮ ಮಹಿಳಾ ಸದಸ್ಯೆ ಪ್ರಿಯಾ ನವೀನ್, ಕಾರ್ಯದರ್ಶಿ ಮಾದೆಯಂಡ ಕುಟ್ಟಪ್ಪ, ಖಜಾಂಚಿ ಅಪ್ಪುಮಣಿಯಂಡ ಬನ್ಸಿ ಭೀಮಯ್ಯ, ಪ್ರಾಂತೀಯ ಸಂಪರ್ಕಾಧಿಕಾರಿ ಡಾ.ಕೋಟೆರ ಪಂಚಮ್ ತಿಮ್ಮಯ್ಯ ವಲಯಾಧ್ಯಕ್ಷ ಸತೀಶ್ ಉಪಸ್ಥಿತರಿದ್ದರು.
ಕಾಂಡಂಡ ರೇಖಾ ಪೊನ್ನಣ್ಣ ಧ್ವಜ ವಂದನೆ ಸಲ್ಲಿಸಿ ಅಪ್ಪುಮಣಿಯಂಡ ಶೈಲಾ ಭೀಮಯ್ಯ ಪ್ರಾರ್ಥಿಸಿದರು. ಸುದೀಪ್ ತಿಮ್ಮಯ್ಯ ಸ್ವಾಗತಿಸಿ, ಮಂದಪಂಡ ಪುಷ್ಪಾ ಸತೀಶ್ ಅತಿಥಿಗಳ ಪರಿಚಯ ಮಾಡಿದರು. ಕುಟ್ಟಪ್ಪ ವಂದಿಸಿದರು.
ವರದಿ : ದುಗ್ಗಳ ಸದಾನಂದ.