ಮಡಿಕೇರಿ ಸೆ.29 : ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟ ಸಣ್ಣ ಪುಲಿಕೋಟು ಗ್ರಾಮದ ಯೋಧ ಉದಿಯನ ಜಿತನ್ ಅವರ ಮನೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಯೋಧನ ತಂದೆ, ತಾಯಿ, ಪತ್ನಿ, ಸಹೋದರ ಹಾಗೂ ಕುಟುಂಬದ ಸದಸ್ಯರೊಂದಿಗೆ ಶಾಸಕರು ಚರ್ಚಿಸಿದರು. ಕೆಪಿಸಿಸಿ ಸದಸ್ಯ ಬೇಕಲ್ ರಮಾನಾಥ್, ಗ್ರಾ.ಪಂ ಸದಸ್ಯ ಕೆದಂಬಾಡಿ ವಿಶು ಪ್ರವೀಣ್ ಕುಮಾರ್, ಡಿಸಿಸಿ ಸದಸ್ಯರು ಹಾಗೂ ವಕೀಲರಾದ ಸುನಿಲ್ ಪತ್ರವೋ, ಕಾಂಗ್ರೆಸ್ ಪ್ರಮುಖ ಕೋಳಿಬೈಲು ವೆಂಕಟೇಶ್, ಅಯ್ಯಂಗೇರಿ ಪಂಚಾಯಿತಿ ಸದಸ್ಯೆ ಕಾವೇರಮ್ಮ, ಸ್ಥಳೀಯರಾದ ಪಟ್ಟಮಾಡ ಸಂಜು, ಬಾರಿಕೆ ಶರತ್, ಗಿರೀಶ್, ನಂಗಾರು ಅಶೋಕ್, ಬಾರಿಕೆ ನಿತಿನ್, ಮಿಥುನ್, ಬಾರಿಕೆ ಲೋಕೇಶ್, ದೇವಂಗೋಡಿ ಸುಬ್ರಾಯ ಮತ್ತಿತರ ಮುಖಂಡರು ಹಾಜರಿದ್ದರು.









