ವಿರಾಜಪೇಟೆ ಸೆ.29 : ನವದೆಹಲಿಯಲ್ಲಿ ನಡೆದ ಪ್ರತಿಷ್ಠಿತ ರಾಷ್ಟ್ರ ಮಟ್ಟದ ಎನ್.ಸಿ.ಸಿ ಶಿಬಿರದ ಆಲ್ ಇಂಡಿಯಾ ತಲ್ ಸೈನಿಕ ಕ್ಯಾಂಪ್ ನಲ್ಲಿ ಹೆಲ್ತ್ ಅಂಡ್ ಹೈಜೀನ್ ವಿಭಾಗದಲ್ಲಿ ವಿರಾಜಪೇಟೆಯ ಎಂ.ಡಿ.ಆಯುಷ್ ಚಿನ್ನದ ಪದಕ ಪಡೆದಿದ್ದಾರೆ.
ಇವರು ಕರ್ನಾಟಕ ಮತ್ತು ಗೋವಾ ಡೈರೆಕ್ಟೊರೇಟ್ ಅನ್ನು ಪ್ರತಿನಿಧಿಸಿದ್ದಾರೆ.
ಪ್ರಸ್ತುತ ಆಯುಷ್ ದಿ ನೇಷನಲ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್, ಮೈಸೂರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದು, 1 ಕಾರ್ ಆರ್ಮಿ ಆರ್ಟಿ ಬ್ಯಾಟರಿಯಲ್ಲಿ ಸರ್ಜಿಯಾಂಟ್ ಆಗಿದ್ದಾರೆ. ಇವರು ವಿರಾಜಪೇಟೆಯ ಡಾ. ಸುಪ್ರೀತ ಹಾಗೂ ಡಾ.ದೀಪಕ್ ದಂಪತಿಯ ಪುತ್ರ.









