ಮಡಿಕೇರಿ ಸೆ.29 : ರಾಷ್ಟ್ರೀಯ ಹಸಿರು ಪಡೆ, ಇಕೋ ಕ್ಲಬ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಸ್ಕೌಟ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇವರ ಸಹಯೋಗದಲ್ಲಿ ಕೊಡಗು ಅರಣ್ಯ ವೃತ್ತದ ವತಿಯಿಂದ 69 ನೇ ವನ್ಯಜೀವಿ ಸಪ್ತಾಹದ ಪ್ರಯುಕ್ತ ಅಕ್ಟೋಬರ್, 02 ರಂದು ಬೆಳಗ್ಗೆ 7 ಗಂಟೆಗೆ ನಗರದ ಅರಣ್ಯ ಭವನದಿಂದ ವೃಕ್ಷೋದ್ಯಾನದವರೆಗೆ ನಡಿಗೆ ಜಾಥ ಮತ್ತು ಸೈಕಲ್ ಜಾಥ ನಡೆಯಲಿದೆ ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.









