ಸಿದ್ದಾಪುರ ಸೆ.30 : ದಿಟ್ಟಳ್ಳಿ ಗಿರಿಜನ ಆಶ್ರಮ ಶಾಲೆಗೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯ ಅಧಿಕಾರಿ ಎಸ್. ಹೊನ್ನೇಗೌಡ ಹಾಗೂ ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ನವೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಶ್ರಮ ಶಾಲೆಯ ಮಕ್ಕಳಿಗೆ ಈ ಮಾಹೆಯಲ್ಲಿ ಪೂರೈಕೆ ಮಾಡಲಾದ ಗೋಧಿ, ಅಕ್ಕಿ, ಮೈದ, ಅವಲಕ್ಕಿಯಲ್ಲಿ ಹುಳಗಳು ಪತ್ತೆಯಾಗಿದ್ದು. ಶಾಲೆಗೆ ಭೇಟಿ ನೀಡಿದ ಅಧಿಕಾರಿ ಮಕ್ಕಳ ಯೋಗ ಕ್ಷೇಮ ವಿಚಾರಿಸಿದ ನಂತರ ಆಹಾರ ಪದಾರ್ಥಗಳನ್ನು ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅಧಿಕಾರಿ, ತಾವು ಅಧಿಕಾರ ಸ್ವೀಕಾರ ಮಾಡಿ 15 ದಿನಗಳಾಗಿದ್ದು, ಇಲ್ಲಿಗೆ ಪೂರೈಕೆ ಮಾಡಲಾದ ಆಹಾರ ಪದಾರ್ಥಗಳು ಕಳಪೆ ಗುಣಮಟ್ಟದ್ದು ಇದನ್ನು. ಮಕಳಿಗೆ ಪೂರೈಕೆ ಮಾಡದಂತೆ ಸೂಚಿಸಲಾಗಿದೆ ಎಂದರು.
ಪೂರೈಕೆ ಮಾಡಲಾದ ಆಹಾರ ಪದಾರ್ಥಗಳನ್ನು ವಾಪಾಸು ಕಳುಹಿಸಿ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದ ಅವರು ತಮ್ಮ ವ್ಯಾಪ್ತಿಯ ಎಲ್ಲಾ ಆಶ್ರಮ ಶಾಲೆಗಳು ಹಾಗೂ ಹಾಸ್ಟೇಲ್‌ಗಳಿಗೆ ಭೇಟಿ ನೀಡುವುದಾಗಿ ಮಾಹಿತಿ ನೀಡಿದರು.
ಈ ಸಂದರ್ಭ ಮುಖ್ಯ ಶಿಕ್ಷಕ ಶಿವಣ್ಣ ಅವರು ಉಪಸ್ಥಿತರಿದ್ದು, ಸಂಪೂರ್ಣ ಮಾಹಿತಿ ನೀಡಿದರು.