ಚೆಟ್ಟಳ್ಳಿ ಸೆ.30 : ಥೈಲ್ಯಾಂಡ್ ರ್ಯಾಲಿ ಚಾಂಪಿಯನ್ ಶಿಪ್ನಲ್ಲಿ ಮಂಗಳೂರಿನ ಜೇಸನ್ ಸಲ್ಡಾನ(ಚಾಲಕ), ಅಮ್ಮತ್ತಿಯ ಉದ್ದಪಂಡ ತಿಮ್ಮಣ್ಣ(ಸಹಚಾಲಕ) ನಿಗಧಿತ ಗುರಿಮುಟ್ಟುವ ಮೂಲಕ ಮೊದಲ ಬಾರಿಗೆ ಭಾರತೀಯರು ಥೈಲ್ಯಾಂಡ್ ರ್ಯಾಲಿ ಓವರಾಲ್ ಚಾಂಪಿಯನ್ ಶಿಪ್-2023 ಆಗಿ ಹೊರಹೊಮ್ಮಿದ್ದಾರೆ.
ನಾಲ್ಕನೇ ಸುತ್ತಿನ ರ್ಯಾಲಿಯಲ್ಲಿ ಥೈಲಾಂಡ್, ಜಪಾನ್, ಮಲೇಶಿಯಾ ಹಾಗೂ ಭಾರತ ಸೇರಿದಂತೆ ಒಟ್ಟು 56 ಅಂತರಾಷ್ಟ್ರೀಯ ರ್ಯಾಲಿಪಟುಗಳು ಭಾಗವಹಿಸಿದ್ದು, ಜೇಸನ್ ಸಲ್ಡಾನ ಹಾಗೂ ಉದ್ದಪಂಡ ತಿಮ್ಮಣ್ಣ 2.1 ವಿಭಾಗದ ನಾಲ್ಕನೇ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದರು.
ಮೊದಲನೇಯ ಹಂತದಿಂದಲೂ ಉತ್ತಮ ಅಂಕ ಪಡೆಯವ ಮೂಲಕ ಕೊನೆಯ ಹಂತಕ್ಕೆ ತಲುಪಿ ದಾಖಲೆಯ ಹಂತದಲ್ಲಿ 2.1 ವಿಭಾಗ ಹಾಗೂ ಓವರಾಲ್ ಚಾಂಪಿಯನ್ಶಿಪ್ ಪಡೆಯಲು ಸಫಲರಾದರು.
ಮುಂದೆ ಹೈದರಬಾದ್ನಲ್ಲಿ ನಡೆಯುವ ಐಎನ್ಆರ್ಸಿ ರ್ಯಾಲಿಯ 4ನೇ ಸುತ್ತಿಗೆ ಜೇಸನ್ ಸಲ್ಡಾನ ಹಾಗೂ ಉದ್ದಪಂಡ ತಿಮ್ಮಣ್ಣ ಜೋಡಿ ಸ್ಪರ್ಧಿಸಲಿದ್ದಾರೆ.
ವರದಿ : ಕಾಳಯ್ಯ