ಮಡಿಕೇರಿ ಅ.1 ಮಡಿಕೇರಿಯ ರೋಟರಿ ವುಡ್ಸ್ ವತಿಯಿಂದ ನೀಡಲಾಗುವ ನೇಷನ್ ಬಿಲ್ಡರ್ ಪ್ರಶಸ್ತಿಗೆ ಭಾಗಮಂಡಲದ ಶ್ರೀಕಾವೇರಿ ಪದವಿ ಪೂರ್ವ ಕಾಲೇಜ್ ನ ಪ್ರಾಂಶುಪಾಲ ಕುಂದಲ್ಪಾಡಿ ದಿವಾಕರ ಅವರು ಭಾಜನರಾಗಿದ್ದಾರೆ.
ಕಳೆದ 30ವರ್ಷಗಳಿಂದ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ 2021ರಿಂದ ಪ್ರಾಂಶುಪಾಲರಾಗಿ ಭಡ್ತಿ ಹೊಂದಿ ಸೇವೆ ಸಲ್ಲಿಸುತಿರುವ ದಿವಾಕರ ಅವರು ಅರ್ಥಶಾಸ್ತç ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಎನ್‌ಸಿಇಆರ್‌ಟಿ ಪಠ್ಯ ಪುಸ್ತಕದ ಅನುವಾದ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಪದವಿ ಪೂರ್ವ ಶಿಕ್ಷಣದಲ್ಲಿ ಇವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ನೇಷನ್ ಬಿಲ್ಡರ್ ಪ್ರಶಸ್ತಿಯನ್ನು ನೀಡಲಾಗಿದೆ.
ಮಡಿಕೇರಿಯ ಹೊಸ ಬಡಾವಣೆಯಲ್ಲಿ ನೆಲೆಸಿರುವ ದಿವಾಕರ ಅವರು ಪೆರಾಜೆ ಗ್ರಾಮದ ಕುಂದಲ್ಪಾಡಿ ದಿವಂಗತ ಜತ್ತಪ್ಪ ಹಾಗೂ ಬೊಮ್ಮಕ್ಕ ದಂಪತಿ ಪುತ್ರರಾಗಿದ್ದಾರೆ.










