*ಮೊಗೇರ ಗ್ರಾಮ ವಿಕಾಸ ಯೋಜನೆ : ಬಹುಮಾನ ವಿತರಣೆ*
01/10/2023

ಮಡಿಕೇರಿ ಅ.1 : ಮೊಗೇರ ಗ್ರಾಮ ವಿಕಾಸ ಯೋಜನೆಯ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ಲಾಟರಿ ಲಕ್ಕಿಡಿಪ್ ನಲ್ಲಿ ವಿಜೇತರಾದವರಿಗೆ ನಗದು ಬಹುಮಾನ ವಿತರಿಸಲಾಯಿತು.
ಸುಳ್ಯದ ಕರುಣಾಕರ ಪ್ರಥಮ ಬಹುಮಾನ (ಸಂಖ್ಯೆ 2378) ರೂ.10 ಸಾವಿರ, ಪತ್ರಕರ್ತ ಸೋಮವಾರಪೇಟೆಯ ಭಾಸ್ಕರ ದ್ವಿತೀಯ ಬಹುಮಾನ (ಸಂಖ್ಯೆ 2712) ರೂ.7 ಸಾವಿರ ಹಾಗೂ ಬೆಟ್ಟಗೇರಿಯ ತೀರ್ಥಪ್ರಸಾದ್ ತೃತೀಯ ಬಹುಮಾನ (ಸಂಖ್ಯೆ 1904) ರೂ.3 ಸಾವಿರ ಪಡೆದುಕೊಂಡರು.
ಗ್ರಾಮ ವಿಕಾಸ ಯೋಜನೆಯ ಅಧ್ಯಕ್ಷ ಗೌತಮ್ ಶಿವಪ್ಪ, ರಾಜ್ಯ ಉಪಾಧ್ಯಕ್ಷ ಬಿ.ಶಿವಪ್ಪ ಮತ್ತಿತರ ಪ್ರಮುಖರು ಬಹುಮಾನ ವಿತರಿಸಿದರು.
