ಮಡಿಕೇರಿ ಅ.2 : ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ 76ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಗೌಡ ಜನಾಂಗದ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು ನಡೆಯಿತು.
ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬೆಕಲ್ ನವೀನ್, ಜನಾಂಗದ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತಾಗಬೇಕು ಎಂದು ಕರೆ ನೀಡಿದರು.
ಪುಟಾಣಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪೇರಿಯನ ಪ್ರಣವಿ ಹಾಗೂ ಪೇರಿಯನ ಮಾನ್ಯ ಪ್ರಾರ್ಥಿಸಿದರು, ಪರಿಚನ ಸತೀಶ್, ಪುದಿನೆರವನ ರೇವತಿ ರಮೇಶ್ ಹಾಗೂ ಕೆದಂಬಾಡಿ ಕಾಂಚನ ನಿರೂಪಿಸಿದರು. ವಿದ್ಯಾ ಸಂಘದ ಕಾರ್ಯದರ್ಶಿ ಪೇರಿಯನ ಉದಯ ವಂದಿಸಿದರು.
::: ಸ್ಪರ್ಧಾ ವಿಜೇತರು :::
ಛದ್ಮವೇಶ ಸ್ಪರ್ಧೆಯಲ್ಲಿ ಕೊಂಪುಳಿರ ಧ್ವನಿ ಪ್ರಥಮ, ಕರ್ಣಯನ ಯುಕ್ತ ದ್ವಿತೀಯ, ಅಯ್ಯಂಡ್ರ ಶಾನ್ ಚಂಗಪ್ಪ ತೃತೀಯ ಸ್ಥಾನ ಪಡೆದುಕೊಂಡರು.
ಚಿತ್ರಕಲೆ ಸ್ಪರ್ಧೆಯಲ್ಲಿ ಸೊರ್ಣಂಗೇರಿ ನಿಶ್ಮಿತಾ ಪ್ರಥಮ, ಮೂಲೆಮಜಲು ಆರ್ಥ ಪೊನ್ನಪ್ಪ ದ್ವಿತೀಯ, ಮೂಲೆಮಜಲು ಆರ್ಹ ಪೊನ್ನಪ್ಪ ತೃತೀಯ, ಗೌಡ ಮನೆತನದ ಹೆಸರುಗಳನ್ನು ಹೇಳುವ ಸ್ಪರ್ಧೆಯಲ್ಲಿ ಪರಿಚನ ಜನ್ಯ ಹರೀಶ್ ಪ್ರಥಮ, ಕಾಳೇರಮ್ಮನ ರಾಜೇಶ್ ದ್ವಿತೀಯ, ನಡುವಟ್ಟೀರ ಹಿಮಾನಿ ತೃತೀಯ ಬಹುಮಾನ ಪಡೆದರು.
ಗೌಡ ಸಂಸ್ಕೃತಿ ಯ ಪ್ರಬಂಧ ಸ್ಪರ್ಧೆಯಲ್ಲಿ ಪಳಂಗೋಟು ತುಳಸಿ ಪ್ರಥಮ, ದೇಶಕೋಡಿ ಮಾನ್ಯ ದ್ವಿತೀಯ ಹಾಗೂ ಅಮ್ರಾಟಿ ವೀಕ್ಷಾ ಗೌಡ ತೃತೀಯ, ಸ್ವಾತಂತ್ರ್ಯ ಹೋರಾಟದಲ್ಲಿ ಗೌಡ ಜನಾಂಗದ ಪಾತ್ರ ಪ್ರಬಂಧ ಸ್ಪರ್ಧೆಯಲ್ಲಿ ಕರ್ಣಯನ ಸುಶ್ಮಿತ ಪ್ರಥಮ, ನಿಡ್ಯಮಲೆ ಪ್ರಕೃತಿ ದ್ವಿತೀಯ, ಬಾರನ ಸುಭಿಕ್ಷಾ ಹಾಗೂ ಕೋರನ ಹೃತ್ರ್ಪೂವಿಕ ತೃತೀಯ ಬಹುಮಾನ ಪಡೆದುಕೊಂಡರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳ ಪೋಷಕರಿಗೆ ನಡೆದ ಅರೆಭಾಷೆ ಹಾಡಿನ ಸ್ಪರ್ಧೆಯಲ್ಲಿ ಕುಲ್ಲಚ್ಚನ ಭಾಗೀರತಿ ಪ್ರಥಮ, ಕಾಳೇರಮ್ಮನ ರಷಿ ದ್ವಿತೀಯ ಹಾಗೂ ಪೈಕೇರ ಸುಚಿ ಮನೋಹರ ತೃತೀಯ ಬಹುಮಾನ ಗಳಿಸಿದರು.
ಕೋಡಿ ಭರತ್, ಮಿಲನಾ ಭರತ್, ಪರಿಚನ ತೇಜಸ್ವಿನಿ ಹಾಗೂ ಪಟ್ಟಡ ಮಂಜುಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿ ಮಕ್ಕಳೊಂದಿಗೆ ಅಭಿಪ್ರಾಯ ಹಂಚಿಕೊಂಡರು.









