ಮಡಿಕೇರಿ ಅ.2 : ಶಾಂತಿನಿಕೇತನ ಯುವಕ ಸಂಘದ 45ನೇ ವರ್ಷದ ಗಣೇಶ ವಿಸರ್ಜನೋತ್ಸವವು ಅ.3 ರಂದು ನಡೆಯಲಿದೆ.
“ಲೋಕ ಕಲ್ಯಾಣಕ್ಕಾಗಿ ಸಿಂದೂರ ರಾಕ್ಷಸನನ್ನು ವಧಿಸುವ ಮೂಲಕ ಗಣಪತಿಗೆ ಸಿಂದೂರ ಗಣಪತಿ” ಎಂಬ ಹೆಸರು ಬಂದ ಕಥಾ ಹಂದರವಿರುವ ಕಲಾಕೃತಿಗಳ ಚಲನವಲನಗಳಿರುವ ಶೋಭಯಾತ್ರೆ ನಡೆಯಲಿದೆ.
ಸೆ.19 ರಂದು ಪ್ರತಿಷ್ಠಾಪಿಸಲ್ಪಟ್ಟು 15 ದಿನಗಳ ಕಾಲ ನಿತ್ಯ ಪೂಜೆಯೊಂದಿಗೆ ಅ.3 ರಂದು ಸಂಜೆ 5 ಗಂಟೆಗೆ ವಿಸರ್ಜನ ಪೂಜೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ ಜರುಗಲಿದ್ದು, ನಂತರ ಭಕ್ತಾಧಿಗಳಿಗೆ ಅನ್ನದಾನ ನೆರವೇರಲಿದೆ.
ಸಂಜೆ 6 ಗಂಟೆಗೆ ಹೊರಲಿರುವ ಶೋಭಯಾತ್ರೆಯು ಶಾಂತಿನಿಕೇತನ, ಕೆಎಸ್‍ಆರ್‍ಟಿಸಿ ಡಿಪೋ ಮುಂಭಾಗ, ಜನರತ್ ತಿಮ್ಮಯ್ಯ ವೃತ್ತ, ಹಳೆಯ ಖಾಸಗಿ ಬಸ್ ನಿಲ್ದಾಣ, ಇಂದಿರಾಗಾಂಧಿ ವೃತ್ತ, ಚೌಡೇಶ್ವರಿಯಲ್ಲಿ ಪ್ರದರ್ಶನ ನೀಡಲಾಗುತ್ತದೆ.
ಮಂಟಪದಲ್ಲಿ ಬೆಂಗಳೂರಿನ ಆರ್.ಜೆ. ಸ್ಟುಡಿಯೋ ದವರಿಂದ ಅತ್ಯಾಧುನಿಕ ಕೂಲ್ ಫೈರ್ ಹಾಗೂ ಸ್ಟುಡಿಯೋ, ಸೆಟ್ಟಿಂಗ್, ಮಡಿಕೇರಿಯ ಗುರು ಲೈಟಿಂಗ್ಸ್‍ನ ಲೋಕೇಶ್ ಅವರ ಸೌಂಡ್ಸ್, ವಿಜಯ್ ಮತ್ತು ತಂಡದಿಂದ ಚಲನವಲನ, ಡಿಕೇರಿಯ ಕಲಾವಿದ ರವಿ ಮತ್ತು ತಂಡ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ. 70ಕ್ಕೂ ಹೆಚ್ಚು ಕಾರ್ಯಕರ್ತರು ಸತತ ಎರಡು ತಿಂಗಳಿನಿಂದ ಈ ಕಾರ್ಯದಲ್ಲಿ ಮಗ್ನರಾಗಿದ್ದು, 12 ಲಕ್ಷ ರೂ.ವೆಚ್ಚದಲ್ಲಿ ಶೋಭಯಾತ್ರೆ ಹೊರಡಲಿದೆ.










