ಮಡಿಕೇರಿ ಅ.2 : ಮಡಿಕೇರಿ ನಗರದ ರಸ್ತೆಗಳ ಅವ್ಯವಸ್ಥೆಯನ್ನು ಖಂಡಿಸಿ ನಗರಸಭೆ ವಿರುದ್ಧ ಕೊಡಗು ರಕ್ಷಣಾ ವೇದಿಕೆ ಅ.3 ರಂದು ನಡೆಸುತ್ತಿರುವ ಪ್ರತಿಭಟನೆಗೆ ಕೊಡಗು ರಕ್ಷಣಾ ವೇದಿಕೆಯ ಆಟೋ ಚಾಲಕರ ಘಟಕ ಬೆಂಬಲ ವ್ಯಕ್ತಪಡಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಆಟೋ ಘಟಕದ ನಗರಾಧ್ಯಕ್ಷ ಪಿ.ವೈ.ಸುಲೈಮಾನ್ ಮಂಗಳವಾರ ಬೆಳಗ್ಗೆ 10.30 ರಿಂದ 11.30 ಗಂಟೆಯವರೆಗೆ ಚಾಲಕರು ಆಟೋ ರಿಕ್ಷಾಗಳ ಸಂಚಾರವನ್ನು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.









