ಮಡಿಕೇರಿ ಅ.8 : ನಿರ್ಗತಿಕರಿಗಾಗಿ ” ಜೀವನದಾರಿ” ಆಶ್ರಮ ನಡೆಸುತ್ತಿದ್ದ ನಗರದ ರಾಣಿಪೇಟೆ ನಿವಾಸಿ ರಮೇಶ್ ಇಂದು ಬೆಳಿಗ್ಗೆ ನಿಧನರಾದರು.
ಕೆಲವು ದಿನಗಳ ಹಿಂದೆ ತಮ್ಮ ಮನೆಯಲ್ಲಿ ಅಡುಗೆ ಅನಿಲ. ಸೋರಿಕೆಯಿಂದ ಉಂಟಾದ ಬೆಂಕಿ ಅವಘಾಡದಲ್ಲಿ ಗಾಯಗೊಂಡು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ನಸುಕಿನ ವೇಳೆ 3.30 ಗಂಟೆಗೆ ನಿಧನರಾದರು. ಇವರ ಅಂತ್ಯಕ್ರಿಯೆ ಸೋಮವಾರ ಬೆಳಿಗ್ಗೆ ಮಡಿಕೇರಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನಿರ್ಗತಿಕರಿಗರ ಜೀವನಧಾರಿಯಾಗಿದ್ದ ರಮೇಶ್ : ರಸ್ತೆ ಬದಿಯಲ್ಲಿ ಮಲಗುತ್ತಿದ್ದ ನಿರ್ಗತಿಕರಿಗಾಗಿ ವಿಕಾಸ್ ಜನಸೇವಾ ಟ್ರಸ್ಟ್ ಆರಂಭಿಸಿ “ಜೀವನದಾರಿ” ಆಶ್ರಯವನ್ನು ಸುಂಟಿಕೊಪ್ಪದ ಏಳನೇ ಹೊಸಕೋಟೆ ಬಳಿಯ ತೊಂಡೂರಿನಲ್ಲಿ ಆರಂಭಿಸಿದ್ದರು. ಸದ್ಯ 30ಕ್ಕೂ ಅಧಿಕಮಂದಿ ವೃದ್ಧರು ಇದ್ದಾರೆ.







