ಮಡಿಕೇರಿ ಅ.9 : ಸಂವಿಧಾನದ ಆರ್ಟಿಕಲ್ 244 R/w 6 ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಯನ್ನು ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ 3ನೇ ಹಂತದ ಪಾದಯಾತ್ರೆಯ ಮುಂದುವರಿದ ಭಾಗವನ್ನು ದಕ್ಷಿಣ ಕೊಡಗಿನ ಕಿರ್ನಾಲ್‍ನಾಡ್ – ಗುಮ್ಮತ್ಮಾಡ್ ನಾಡ್ ಮಂದ್ (ಕಿರ್ಗೂರ್-ಬೆಸಗೂರ್) ಮತ್ತು ಪತ್ತ್ ಕಟ್‍ನಾಡ್ (ಬೆಕ್ಕೆಸೆಡ್ಲೂರ್-ಕಾನೂರ್) ಮಂದ್ ನಲ್ಲಿ ನಡೆಸಿತು.
ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕೊಡವ ಜಾಗೃತಿ ಸಭೆ ಆರಂಭಿಸಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ, 9 ಪ್ರಮುಖ ಹಕ್ಕೊತ್ತಾಯಗಳನ್ನು ಮಂಡಿಸಿದರು.
ಕೊಡವರ ಸಾಂವಿಧಾನಿಕ ಭದ್ರತೆಗಾಗಿ ಹಕ್ಕೊತ್ತಾಯಗಳ ಕುರಿತು ಸರ್ಕಾರದ ಗಮನ ಸೆಳೆಯಲು ಐದು ಹಂತಗಳಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ. ಬೇಡಿಕೆ ಈಡೇರುವವರೆಗೆ ಸಿಎನ್‍ಸಿ ಹೋರಾಟ ಮುಂದುವರೆಯಲಿದೆ. ಸರ್ವ ಕೊಡವರು ಈ ಹೋರಾಟದೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಕೊಡವ ಜನಾಂಗದ ನ್ಯಾಯಯುತ, ಸೂಕ್ಷ್ಮ ಸಮಗ್ರ ಕುಲಶಾಸ್ತ್ರ ಅಧ್ಯಯನ, ಕೊಡವ “ಸಂಸ್ಕಾರ ಗನ್” ಹಕ್ಕುಗಳನ್ನು ಸಿಖ್ಖರ “ಕಿರ್ಪಾನ್” ಗೆ ಸಮಾನವಾಗಿ ಸಂವಿಧಾನದ 25 ಮತ್ತು 26ನೇ ವಿಧಿಗಳಡಿಯಲ್ಲಿ ಕೊಡವರ “ಧಾರ್ಮಿಕ ಸಂಸ್ಕಾರ”ವೆಂದು ರಕ್ಷಿಸುವುದು, ಮಾತೃ ಭಾಷೆ ಕೊಡವ ತಕ್ಕ್ ಅನ್ನು 8ನೇ ಶೆಡ್ಯೂಲ್‍ಗೆ ಸೇರಿಸುವುದು ಸೇರಿದಂತೆ 9 ಬೇಡಿಕೆಗಳ ಕುರಿತು ನಾಚಪ್ಪ ವಿವರಿಸಿದರು.
ಕೋಡೆಂಗಡ ಪವಿತ್ರಾ ಸುರೇಶ್, ಚೆಪ್ಪುಡಿರ ಪೊನ್ನಪ್ಪ, ಚೆಪ್ಪುಡಿರ ಮನೋಜ್, ಕೋಡೆಂಗಡ ವಿಠಲ್, ಚೆಪ್ಪುಡಿರ ಡಿಕ್ಕಿ, ಜಮ್ಮಡ ಮೋಹನ್, ಕಾಂಡೇರ ಸುರೇಶ್, ಪರ್ವಂಗಡ ನವೀನ್, ಅಪ್ಪೆಂಗಡ ಮಾಲೆ, ಬೊಟ್ಟಂಗಡ ಜಪ್ಪು, ಕಿರ್ನಾಳ್‍ನಾಡ್ ಶರಿನ್, ಕಿರಿಯಮಾಡ ಶಾನ್, ಕಿರಿಯಮಾಡ ಸಫನ್, ಕಾಕಮಾಡ ದೀಕ್ಷಿತ್, ಚಿರಿಯಪಂಡ ಲೋಹಿತ್, ಚೇಮಿರ ಮನು, ಗದಂಗಡ ಚಿಪ್ನು, ಚೆಪ್ಪುಡಿರ ತಿಲಕ್, ಚೆಪ್ಪುಡಿರ ದೇವಯ್ಯ, ಇಟ್ಟೀರ ಚೆಂಗಪ್ಪ, ಕೊಕ್ಕೆಂಗಡ ಸುಂದರ್, ಕೋಡೆಂಗಡ ಅಪ್ಪಣ್ಣ, ತೀತರಮಾಡ ಗಿರೀಶ್, ಚೆಪ್ಪುಡಿರ ಮಹೇಶ್, ಪುಲ್ಲಂಗಡ ನಟೇಶ್, ಕಾಕಮಾಡ ಆದರ್ಶ್, ಮಂಡೆಯಾಡ್ ಧೀರಜ್, ಆಲೆಮಾ ಸುಧೀರ್, ಕೆ.ಶಂಭು ನಾಣಯ್ಯ, ಮಲ್ಲಮಾಡ ಪೂಣಚ್ಚ, ಮಾಚಿಮಾಡ ರವೀಂದ್ರ, ಮಾಚಂಗಡ ಮೊಣ್ಣಪ, ಪೋರಂಗಡ ಪೂಣಚ್ಚ, ಥಾನಚಿರ ಅಚ್ಚಯ್ಯ, ಮಚ್ಚಂಗಡ ಸಂಪತ್, ಪೋರಂಗಡ ಸೂರಜ್, ಮಲ್ಲಮಾಡ ಗುಲ್ಶನ್, ಮಲ್ಲಮಾಡ ಸುನಿಲ್, ಮಲ್ಲಮಾಡ ನರೇಶಚಂದ್ರ, ಸುಳ್ಳಿಮಾಡ ಶಿಲ್ಪಾ ಅಪ್ಪಣ್ಣ, ಬಾಚಮಂಡ ರೆಮಿತಾ, ಬಾಚಮಂಡ ಮಹೇಶ್, ಮಾಚಿಮಾಡ ಸಂಪತ್, ಮಲ್ಲಮಾಡ ರಶ್ಮಿ, ಸುಳ್ಳಿಮಾಡ ರೇಖಾ, ಮಲ್ಲಮಾಡ ಶ್ಯಾಮಲ, ಸುಳ್ಳಿಮಾಡ ಗೀತ, ಮಾಚಿಮಾಡ ವಾಣಿ, ಮಾಚಿಮಾಡ ಜ್ಯೋತಿ, ಚಿರಿಯಪಂಡ ಶ್ಯಾಮ್, ಚೊಟ್ಟೆಕ್‍ಮಾಡ ಬಿದ್ದಪ್ಪ, ಚಿರಿಯಪಂಡ ಪ್ರಕಾಶ್, ಕೇಚಮಾಡ ಸಿದ್ದು, ಕೇಚಮಾಡ ಶರತ್, ಮಲ್ಚಿರ ಮಂಜು, ಕೇಚಮಾಡ ಧ್ರುವ ನಾಣಯ್ಯ, ಕೋಡೆಂಗಡ ನರೇಂದ್ರ, ಕಟ್ಟೆಮಾಡ ಸುಜು, ಚೊಟ್ಟೆಕ್‍ಮಾಡ ರಮೇಶ್, ಕೋಡೆಂಗಡ ಮನು, ಚೇಂದಿರ ಅರಸು, ಚೊಟ್ಟೆಕ್‍ಮಾಡ ಸ್ವರೂಪ್, ಕಾಡ್ಯಮಾಡ ಬೋಪಣ್ಣ, ಮಾಚಿಮಾಡ ವಾಸು ಮುತ್ತಣ್ಣ, ಮಾಚಂಗಡ ಸನ್ನಿ ಮಾಚಯ್ಯ, ಪರ್ವಂಗಡ ಪೂಣಚ್ಚ, ಮಾಚಿಮಾಡ ಸತೀಶ್, ಗುಡಿಯಂಗಡ ಲಿಕಿನ್ ಬೋಪಣ್ಣ, ಮಾಚಮಾಡ ಶಂಭು, ಚೆರಿಯಂಡ ನಾಣಯ್ಯ, ಮಲ್ಲಮಾಡ ಸುನಿಲ್, ಅರಮಣಮಾಡ ಪ್ರಮೀಳ, ಅರಮಣಮಾಡ ನಿಖಿ, ಅರಮಣಮಾಡ ಅರುಣ್, ಮಲ್ಲಮಾಡ ದಿಯಾನ್, ಅಲ್ಮೇಂಗಡ ವಿವೇಕ್ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
::: ಅ.10ರ ಪಾದಯಾತ್ರೆ :::
ಅ.10 ರಂದು ಬೆಳಗ್ಗೆ 10 ಗಂಟೆಗೆ ಮರೆನಾಡ್, ಪಾಕೇರಿನಾಡ್, ಐವತ್ನಾಡ್, ಪೊನಾಡ್ ಈ ನಾಲ್ಕು ನಾಡು ಮಂದ್‍ಗಳಲ್ಲಿ (ಬಾಡಗರ ಕೇರಿ-ತೆರಾಲ್-ಬಿರುನಾಣಿ) (ಪೊನ್ನಂಪೇಟೆ ತಾಲ್ಲೂಕು)








