ಮಡಿಕೇರಿ ಅ.9 : ನಗರದಲ್ಲಿ ನಡೆದ ಶಾಪಿಂಗ್ ಉತ್ಸವದಲ್ಲಿ ಆಯೋಜಿಸಲಾಗಿದ್ದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಎಸ್.ಆರ್ವಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ನಗರದ ಕಾವೇರಿ ಹಾಲ್‍ನಲ್ಲಿ ನಡೆದ ನೃತ್ಯದಲ್ಲಿ ಸೋಲೋ ವಿಭಾಗದಲ್ಲಿ ಆರ್ವಿ ಪ್ರಥಮ ಸ್ಥಾನ ಗಳಿಸಿದ್ದಾಳೆ. ಇತ್ತೀಚೆಗೆ ಮಂಗಳೂರಿನ ಸ್ಪಂದನ ಟಿ.ವಿ ನಡೆಸಿದ ಕರ್ನಾಟಕ ಬೆಸ್ಟ್ ಡ್ಯಾನ್ಸ್ ಜೂನಿಯರ್ಸ್ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾಳೆ.
ಕನ್ನಂಡಬಾಣೆಯ ನಿವಾಸಿ, ಪತ್ರಕರ್ತ ಎಸ್.ಪಿ.ಸುರ್ಜಿತ್ ಹಾಗೂ ಬಿ.ಸಿ.ಲೆಮಿತಾಶ್ವಿನಿ ದಂಪತಿಯ ಪುತ್ರಿಯಾಗಿರುವ ಆರ್ವಿ, ಮಡಿಕೇರಿಯ ನಾಟ್ಯ ಕಲಾ ಡ್ಯಾನ್ಸ್ ಸ್ಟುಡಿಯೋದ ನೃತ್ಯ ತರಬೇತುದಾರ ಮತ್ತು ಸಂಯೋಜಕ ಅಭಿಷೇಕ್ ಅವರ ಬಳಿ ಆರ್ವಿ ತರಬೇತಿ ಪಡೆಯುತ್ತಿದ್ದಾಳೆ.












