ಮಡಿಕೇರಿ ಅ.10 : ಚದುರಂಗದಾಟ ಮಕ್ಕಳಲ್ಲಿ ಬೌದ್ದಿಕ ಕೌಶಲ್ಯವನ್ನು ಹೆಚ್ಚಿಸುವ ಮೂಲಕ ಸಂದಿಗ್ಧ ಪರಿಸ್ಥಿಯನ್ನು ನಿಭಾಯಿಸಲು ಸಹಕಾರಿಯಾಲಿದೆ ಎಂದು ಮಕ್ಕಳ ತಜ್ಞ ಡಾ.ಬಿ.ಸಿ.ನವೀನ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಮಡಿಕೇರಿಯ ಮಾಸ್ಟರ್ ಮೈಂಡ್ ಚೆಸ್ ಸ್ಕೂಲ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ನಲ್ಲಿ ಆಯೋಜಿಸಿದ್ದ ಕೊಡಗು ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳು ಟಿವಿ, ಮೊಬೈಲ್ ಗೆ ದಾಸರಾಗುವುದನ್ನು ತಪ್ಪಿಸಲು ಚೆಸ್ ಸೇರಿದಂತೆ ಇನ್ನಿತರ ಬೌದ್ಧಿಕ ಕೌಶಲ್ಯವನ್ನು ಹೆಚ್ಚಿಸುವ ಆಟಗಳಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಸ್ಟರ್ ಮೈಂಡ್ ಚೆಸ್ ಸ್ಕೂಲ್ ನ ಸಂಸ್ಥಾಪಕಿ ಕಾವ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮದ್, ತಜ್ಞ ವೈದ್ಯರಾದ ಡಾ.ಅಭಿನಂದನ್, ಕೊಡಗು ಚಾನೆಲ್ ಸಂಪಾದಕ ಜಿ.ವಿ. ರವಿಕುಮಾರ್, ಕೊಡಗು ಚಾನೆಲ್ ನ ಹಿರಿಯ ವರದಿಗಾರ ಟಿ.ಜೆ.ಪ್ರವೀಣ್ ಕುಮಾರ್, ಡೈನಾಮಿಕ್ ಪತ್ರಿಕೆಯ ಉಪ ಸಂಪಾದಕ ಜಿ.ಎಸ್.ವಿನಯ್ ಕುಮಾರ್ ಭಾಗವಹಿಸಿ ಚೆಸ್ ಆಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಎಂ. ಸ್ನೇಹ ನಿರೂಪಿಸಿ, ಜಿ.ವಿ.ಲಿಖಿತ್ ವಂದಿಸಿದರು.










