ನಾಪೋಕ್ಲು ಅ.17 : ನಾಪೋಕ್ಲುವಿನ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾಗಿ ಟಿ.ಸಿ.ರಾಜೀವನ್ ಆಯ್ಕೆಯಾಗಿದ್ದಾರೆ.
ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿ ಹಾಗೂ ನಿರ್ದೇಶಕರುಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಎಂ.ಬಿ.ರಶೀದ್, ಕಾರ್ಯದರ್ಶಿಯಾಗಿ ಟಿ.ಪಿ.ಸುಕುಮಾರ್ ಆಯ್ಕೆಯಾದರು. ಸಹ ಕಾರ್ಯದರ್ಶಿಯಾಗಿ ದೀಪು ದೇವಯ್ಯ, ಖಜಾಂಚಿಯಾಗಿ ಎ.ಎಂ.ಚೇತನ್, ಗೌರವಾಧ್ಯಕ್ಷರಾಗಿ ಎಂ.ಇ.ರಜಾಕ್ ನೇಮಕಗೊಂಡರು.
ನಿರ್ದೇಶಕರಗಳಾಗಿ ಸಮ್ಮದ್, ಜಾಫರ್, ಸಲೀಂ, ವಿಜಯ್ ಕುಮಾರ್, ಸೋಮಣ್ಣ ಬಾಳೆಯಡ, ಮಂಜುನಾಥ್ ,ಶರತ್, ಐ.ಎನ್.ಪ್ರಕಾಶ್, ಪಿ.ಎಲ್.ಜಗದೀಶ್, ಹೆಚ್.ಕೆ.ಸತೀಶ್ ಆಯ್ಕೆಯಾದರು.
ವರದಿ : ದುಗ್ಗಳ ಸದಾನಂದ








