ನಾಪೋಕ್ಲು ಅ.17 : ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ನಡೆಯಿತು.
ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಚೀಯಕಪೂವಂಡ ಡಿ.ನಾಚಪ್ಪ, ಮಾಳೆಯಂಡ ಎಂ.ಅಪ್ಪಚ, ಮಣವಟ್ಟಿರ ಬಿ ದೀಪಕ್ ಪೊನ್ನಪ್ಪ ,ಮಚ್ಚುರ ಎಂ.ರವೀಂದ್ರ, ಬದಂಜೆಟ್ಟಿರ ಎಂ.ತಿಮ್ಮಯ್ಯ, ಕರವಂಡ ಜಿ.ಅಪ್ಪಣ್ಣ ಆಯ್ಕೆಯಾದರು.
ಮಹಿಳಾ ಮೀಸಲು ಕ್ಷೇತ್ರದಿಂದ ಚೀಯಕಪೂವಂಡ ರೀನಾ, ಅಪ್ಪು ಮಣಿಯಂಡ ಕಾವೇರಮ್ಮ ಆಯ್ಕೆಯಾದರು.
ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಐರಿರ ಜಿ.ಟಿಂಸ ಹಾಗೂ ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಮಣವಟ್ಟಿರ ದಯಾ ಚಿಣ್ಣಪ್ಪ ಹಾಗೂ ಪರಿಶಿಷ್ಠ ಜಾತಿ ಕ್ಷೇತ್ರದಿಂದ ಪಾಲೆರ ವಿಜು ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶರತ್ ಪೂಣಚ್ಚ ಕಾರ್ಯನಿರ್ವಹಿಸಿದರು.
ವರದಿ : ದುಗ್ಗಳ ಸದಾನಂದ.









