ಮಡಿಕೇರಿ ಅ.20 : ದಕ್ಷಿಣ ವಲಯ ಮಟ್ಟದ ಹಾಕಿ ಪಂದ್ಯಾವಳಿಗೆ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಹಾಕಿ ಇಂಡಿಯಾ ವತಿಯಿಂದ ಬೆಂಗಳೂರಿನಲ್ಲಿ ನಡೆದ ರಾಜ್ಯ ಹಾಕಿ ತಂಡದ ಆಯ್ಕೆ ಶಿಬಿರದಲ್ಲಿ ಕೊಡಗು ವಿದ್ಯಾಲಯದ ವಿದ್ಯಾರ್ಥಿ ಗಳಾದ ಎ.ಟಿ.ಧವನ್, ನಮನ್ ಬೆಳ್ಯಪ್ಪ, ಶ್ರೀ ವಿಷ್ಣುರಾಜ್ ಹಾಗೂ ಪರ್ಲಿನ್ ಪೊನ್ನಮ್ಮ ದಕ್ಷಿಣ ವಲಯ ಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಪರ್ಲಿನ್ ಪೊನ್ನಮ್ಮ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದು, ಇವರು ಅ. 24 ರ ವರೆಗೆ ಚೆನ್ನೈ ನಲ್ಲಿ ನಡೆಯಲಿರುವ ಪ್ರಥಮ ಹಾಕಿ ಇಂಡಿಯಾ ಸಬ್ ಜೂನಿಯರ್ ಬಾಲಕ – ಬಾಲಕಿಯರ ದಕ್ಷಿಣ ವಲಯ ಚಾಂಪಿಯನ್ ಶಿಪ್ 2023 ರಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
ಇವರಲ್ಲಿ ಅರಮನಮಾಡ ಉದಯ್ ಕುಮಾರ್ ಮತ್ತು ಭವ್ಯ ತಂಗಮ್ಮ ಅವರ ಪುತ್ರ, ನಮನ್ ಬೆಳ್ಯಪ್ಪ ವಕೀಲರಾದ ಅಚ್ಚಪಂಡ ಗಿರಿ ಮತ್ತು ಪದ್ಮ ದಂಪತಿಗಳ ಪುತ್ರಿ.









