ಸುಂಟಿಕೊಪ್ಪ ಅ.20 : ಸುಂಟಿಕೊಪ್ಪ ಸ್ವಸ್ಥ ವಿಶೇಷ ಚೇತನ ಶಾಲೆ ವತಿಯಿಂದ ಸಿ.ಬಿ.ಆರ್ ಸಂಯೋಜಕ ಮುರುಗೇಶ್ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.
ಸುಂಟಿಕೊಪ್ಪದ ಸ್ವಸ್ಥ ಶಾಲಾ ಸಭಾಗಂಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಸ್ಥ ಸಂಸ್ಥೆಯ ನಿರ್ದೇಶಕರಾದ ಆರತಿ ಸೋಮಯ್ಯ, ಸ್ವಸ್ಥ ಶಾಲೆಯ ಸಂಸ್ಥಾಪಕ ಅಧ್ಯಕ್ಷೆ ಗಂಗಾ ಚಂಗಪ್ಪ, ಮೇಲ್ವಿಚಾರಕರಾದ ವನಿತಾ ಚಂಗಪ್ಪ, ಸಹ ಶಿಕ್ಷಕ ಮತ್ತು ಶಿಕ್ಷಕತೇರ ಸಿಬ್ಬಂದಿಗಳು ಒಗ್ಗೂಡಿ ನೆನಪಿನ ಕಾಣಿಕೆ ಸನ್ಮಾನಿಸಿ ಗೌರವಿಸಿದರು.
ಕಳೆದ 13 ವರ್ಷಗಳಿಂದ ಸುಂಟಿಕೊಪ್ಪದ ಸ್ವಸ್ಥ ಸಂಸ್ಥೆಯಲ್ಲಿ ಸಮುದಾಯ ಆಧಾರಿತ ಪುನರ್ವಸತಿ ಯೋಜನೆಯಲ್ಲಿ ಸಂಯೋಜಕರಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡು ತಮ್ಮ ವೃತ್ತಿಯನ್ನು ಆರಂಭಿಸಿದ ಮುರುಗೇಶ್ ವಿಶೇಷ ಚೇತನ ಮಕ್ಕಳು ಹಾಗೂ ವಿಶೇಷ ಚೇತನ ವ್ಯಕ್ತಿಗಳಿಗೆ ನೈಜ ಪಲಾನುಭವಿಗಳಿಗೆ ಸರಕಾರ ಇಲಾಖೆಗಳಿಂದ ದೊರೆಯುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ನೈಜ ಪಲಾನುಭವಿಗಳಿಗೆ ತಲುಪಿಸುವಲ್ಲಿ ಅತ್ತುತ್ತಮ ಸೇವೆ ಸಲ್ಲಿಸಿದ್ದರಲ್ಲದೆ ವಿಶೇಷಚೇತನರ ಪ್ರತಿಭೆಗಳನ್ನು ಅನಾವರಣಗೊಳಿಸಲು ತನ್ನದೆಯಾದ ಕೊಡುಗೆಯನ್ನು ನೀಡಿದ್ದಾರೆ.
ಜಿಲ್ಲೆಯಾದ್ಯಂತ ತೆರಳಿ ವಿಶೇಷ ಚೇತನರನ್ನು ಗುರುತಿಸಿ ಸಹಾಯಕ್ಕೆ ಧಾವಿಸಿ ಅವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಯಶಸ್ಸು ಕಂಡುಕೊಂಡಿದ್ದರು. ತನ್ನ ಬಿಡುವಿನ ವೇಳೆಯಲ್ಲಿಯೂ ಊರಿನ ಜೆಸಿಐ ಸುಂಟಿಕೊಪ್ಪ ಘಟಕ, ನಮ್ಮ ಸುಂಟಿಕೊಪ್ಪ ಬಳಗ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು. ಸಮಾಜ ಸೇವೆಗೆ ಮಾತ್ರ ಸೀಮಿತವಾಗಿರದೆ ತನ್ನಲ್ಲಿರುವ ಕಲಾ ಪ್ರತಿಭೆಯನ್ನು ಪರಿಚಯಿಸಿ ವiದ್ಯಮವೊಂದರಲ್ಲಿ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.









