ಮಡಿಕೇರಿ ಅ.20 : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವ ಈ ಬಾರಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದು, ಈಗಾಗಲೇ ಮಡಿಕೇರಿ ದಸರಾ ಅಲಂಕಾರ ಸಮಿತಿ ವತಿಯಿಂದ ರಂಗೋಲಿ ಸ್ಪರ್ಧೆಯ ತೀರ್ಪುಗಾರಿಕೆ ಹಾಗೂ ಮನೆಗಳಲ್ಲಿ ಗೊಂಬೆ ಜೋಡಣೆಯ ತೀರ್ಪುಗಾರಿಕೆ ಮುಕ್ತಾಯಗೊಂಡಿದೆ. ವಿಜೇತರನ್ನು ಆಯುಧ ಪೂಜೆ ದಿನದಂದು ಘೋಷಣೆಮಾಡಿ ಬಹುಮಾನ ವಿತರಿಸಲಾಗುವುದೆಂದು ಸಮಿತಿ ಅಧ್ಯಕ್ಷ ಮುನೀರ್ ಮಾಚರ್ ತಿಳಿಸಿದ್ದಾರೆ.
ಆಯುಧ ಪೂಜೆ ದಿನವಾದ 23 ರಂದು ಅಲಂಕೃತ ವಾಹನಗಳು ಸಂಜೆ 6.30 ಗಂಟೆ ಒಳಗೆ ಗಾಂಧಿ ಮೈದಾನಕ್ಕೆ ಬರಬೇಕು ತೀರ್ಪುಗಾರರು ಸ್ಥಳಕ್ಕೆ ಆಗಮಿಸಿ ಆಕರ್ಷಕ ವಾಹನಗಳನ್ನು ಬಹುಮಾನಕ್ಕಾಗಿ ವಿವಿಧ ವಿಭಾಗಗಳಲ್ಲಿ ಮಾಡಲಾಗುವುದು.
ಸೈಕಲ್, ಲಾರಿ, ಬಸ್, ಜೆಸಿಬಿ ಸೇರಿದಂತೆ ಎಲ್ಲಾ ರೀತಿಯ ವಾಹನಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು ಎಂದು ಸಮಿತಿ ಅಧ್ಯಕ್ಷ ಮುನೀರ್ ಮಾಚರ್ ತಿಳಿಸಿದ್ದಾರೆ.
ಕಟ್ಟಡ ಅಲಂಕಾರ: ವಿಜಯದಶಮಿಯ ದಿನವಾದ 24 ರಂದು ಸಂಜೆ 6.30 ಗಂಟೆಯೊಳಗೆ ಕಟ್ಟಡಗಳ ಅಲಂಕಾರ ಪೂರ್ಣಗೊಳಿಸಬೇಕು ತೀರ್ಪುಗಾರರು ಸ್ಥಳಕ್ಕೆ ಆಗಮಿಸಿ ಕಟ್ಟಡ ಹಾಗೂ ಮಳಿಗೆಗಳನ್ನು ಬಹುಮಾನಕ್ಕಾಗಿ ವಿವಿಧ ವಿಭಾಗಗಳಲ್ಲಿ ಆಯ್ಕೆ ಮಾಡಲಿದ್ದಾರೆ. ವಾಣಿಜ್ಯ ಸಂಕೀರ್ಣಗಳು, ಹೋಟೆಲ್, ಅಂಗಡಿ, ಮಳಿಗೆಗಳು, ಸರಕಾರಿ ಕಟ್ಟಡ, ಅರೆ ಸರಕಾರಿ ಕಟ್ಟಡ, ಸಹಕಾರಿ ಕಟ್ಟಡ ಸೇರಿದಂತೆ ಎಲ್ಲಾ ಬಗೆಯ ಕಟ್ಟಡಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಪಂದ್ಯದಲ್ಲಿ ಪಾಲ್ಗೊಳ್ಳುವವರು ಹೆಚ್ಚಿನ ಮಾಹಿತಿಗಾಗಿ ಸುಮಿತಿಯ ಉಪಾಧ್ಯಕ್ಷರಾದ ರವಿಗೌಡ-9611101070, ಸಂಘಟನಾ ಕಾರ್ಯದರ್ಶಿ ಜಿ.ಎನ್. ಪುನೀತ್ -7022685868 ಅವರನ್ನು ಸಂಪರ್ಕಿಸಬಹುದಾಗಿದೆ.








