ಮಡಿಕೇರಿ ಅ.21 : ಕಾವೇರಿ ತೀರ್ಥೋದ್ಭವ ಹಿನ್ನೆಲೆ ವಿರಾಜಪೇಟೆಯಿಂದ ತಲಕಾವೇರಿವರೆಗೆ ಎಂಟು ಯುವಕರು ಪಾದಯಾತ್ರೆ ಮಾಡಿದರು.
ಕಾವೇರಿ ಮಾತೆಯ ಭಕ್ತಾದಿಗಳಾಗಿರುವ ಚೆಟ್ಟೋಳಿರ ಶರತ್ ಸೋಮಣ್ಣ , ಮುರುವಂಡ ಸವನ್ ಸೋಮಣ್ಣ, ಕಾಳಮಂಡ ರಾಬಿನ್ ಅಚ್ಚಮ್ಮ , ಚೆಟ್ಟಿಮಾಡ ಸಜನ್ ಕುಟ್ಟಪ್ಪ, ಮಾಚಂಗಡ ಸಚಿನ್, ಪೊರುಕಂಡ ಶಾನ್ , ಮುಕ್ಕಾಟಿರ ಉತ್ತಪ್ಪ, ಅಳಮೇಂಗಡ ಸೋಮಣ್ಣ ಕಾವೇರಿ ತೀರ್ಥೋದ್ಭವದ ಹಿನ್ನೆಲೆ ವಿರಾಜಪೇಟೆಯಿಂದ ಸುಮಾರು 58 ಕಿಮೀ ಪಾದಯಾತ್ರೆ ಕೈಗೊಂಡಿದ್ದರು.
ವಿರಾಜಪೇಟೆ , ಕದನೂರು , ಕಡಂಗ , ನಾಪೋಕ್ಲು, ಬಲ್ಲಮಾವಟೀ , ಅಯ್ಯಂಗೇರಿ ಮೂಲಕ ಭಾಗಮಂಡಲಕ್ಕೆ ಸಂಜೆತಲುಪಿದ ಯುವಕರು , ಮಂಗಳವಾರ ಭಾಗಮಂಡಲದಿಂದ ಎಲ್ಲರೊಂದಿಗೆ ಪಾದಯಾತ್ರೆ ಮುಂದುವರಿಸಿ ತೀರ್ಥೋದ್ಭವ ಮುನ್ನ ತಲಕಾವೇರಿಗೆ ತಲುಪಿದರು.