ಚೆಟ್ಟಳ್ಳಿ ಅ.21 : ಬಂಟ್ವಾಳ ತಾಲೂಕಿನ ಬ್ರಹ್ಮಗಿರಿ ಗೋವಿನ ತೋಟ ಹಾಗೂ ಗೋ ಸೇವಾ ಗತಿವಿಧಿ ಸಂಯುಕ್ತ ಆಶ್ರಯದಲ್ಲಿ ಗೋ ರಥಯಾತ್ರೆಗೆ ಚೆಟ್ಟಳ್ಳಿಯಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ರಥಯಾತ್ರೆಯ ಗೋವಿಗೆ ಬಾಳೆ ಹಣ್ಣು ಹಾಗೂ ಹಸಿ ಹುಲ್ಲನ್ನು ತಿನ್ನಿಸುವ ಮೂಲಕ ಗೌರವ ಸಲ್ಲಿಸಿದರು.
ಹಿಂದೂ ಸಂಘಟನೆಯ ಪ್ರಮುಖರಾದ ಬಲ್ಲಾರಂಡ ಕಂಠಿಕಾರ್ಯಪ್ಪ ಮಾತನಾಡಿ, ಹಿಂದೂ ಧರ್ಮ ದಲ್ಲಿ ಗೋವಿಗೆ ಪೂಜ್ಯ ಸ್ಥಾನವಿದ್ದು, ಪ್ರತಿಯೊಂದು ಕಾರ್ಯ ದಲ್ಲೂ ಗೋವಿಗೆ ಪೂಜೆ ಸಲ್ಲಿಸಲಾಗುತ್ತದೆ.ತಾಯಿಯು ಮಗುವಿಗೆ ಒಂದೆದಡು ವರ್ಷ ಹಾಲುಣಿಸಿ ಪೋಷಿಸಿದರೆ ಗೋವು ಸಾವಿನವರೆಗೂ ಹಾಲುಣಿಸುವ ಪುಣ್ಯ ಕಾರ್ಯ ವನ್ನು ಮಾಡುವ ಮೂಲಕ ಗೋಮಾತೆ ಎನಿಸಿಕೊಂಡಿದೆ. ಗೋವನ್ನು ಕಸಾಯಿಕಾನೆಗೆ ಮಾರಾಟಮಾಡುವುದು ತಡೆ ಯಾಗಬೇಕೆಂದರು.
ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಈಗಿನ ದಿನಗಳಲ್ಲಿ ಗೋವನ್ನು ಪೋಷಿಸುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಪ್ರತಿಯೊಂದು ಮನೆಯಲ್ಲೂ ಗೋವನ್ನು ಪೋಷಿಸುವಂತಾಗ ಬೇಕೆಂದು ತಿಳಿಸಿದರು.
ಕಾವೇರಿ ತೀರ್ಥವನ್ನು ವಿತರಿಸುವ ಮೂಲಕ ಗೋಯಾತ್ರೆಯನ್ನು ಬೀಳ್ಕೊಡಲಾಯಿತು.
ಚೆಟ್ಟಳ್ಳಿ ಸಹಕಾರ ಸಂಘದ ಆಡಳಿಯ ಮಂಡಳಿಯ ಪದಾಧಿಕಾರಿಗಳು ,ಸಿಬ್ಬಂದಿಗಳು, ಚೆಟ್ಟಳ್ಳಿ ಸ್ಥಳಿಯ ಬಿಜೆಪಿಯ ಪ್ರಮುಖರು ಸಾರ್ವಜನಿಕರು ಹಾಜರಿದ್ದರು.