ಮಡಿಕೇರಿ ಅ.22 – ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳ ಎಂಟನೇ ದಿನವಾದ ಸೋಮವಾರ ಆಯುಧಪೂಜಾ ಸಂದಭ೯ ವೈವಿಧ್ಯಮಯ ಕಾಯ೯ಕ್ರಮಗಳು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿಸಲ್ಪಟ್ಟಿದೆ. ಈ ಬಾರಿ ಮಡಿಕೇರಿ ದಸರಾದ ಪ್ರಮುಖ ಆಕಷ೯ಣೆಯಾಗಿರುವ ಭಾರತದ ಹೆಸರಾಂತ ಹಿನ್ನಲೆ ಗಾಯಕ ವಿಜಯಪ್ರಕಾಶ್ ಅವರಿಂದ ಗಾನವೈಭವ ನಡೆಯಲಿದೆ.
ಅ. 23 ರಂದು ಸೋಮವಾರ ಶ್ರೀ ಕಾಮಾಕ್ಷಿ ಮಹಿಳಾ ಸಂಘದಿಂದ ಕಥಕ್ಕಳಿ, ಯುವಜಾನಪದ ಬಳಗ ವತಿಯಿಂದ ಜಾನಪದ ನೖತ್ಯ, ಯುವಜನಪದ ಬಳಗದಿಂದ ನೖತ್ಯ, ಮಡಿಕೇರಿ ತಾಲೂಕು ಬಂಟರ ಸಂಘ, ಕ್ವೀನ್ಸ್ ಆಫ್ ಕೂಗ್೯, ಮಂಗಳೂರಿನ ತಾಂಡವಂ ಡಾನ್ಸ್ ಅಕಾಡೆಮಿಯಿಂದ ನೖತ್ಯರಂಗ್ ಸೋಮವಾರದ ಇತರ ಸಾಂಸ್ಕೖತಿಕ ಕಾಯ೯ಕ್ರಮಗಳಾಗಿದೆ.










