ಮಡಿಕೇರಿ ಅ.30 : ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2023-2024 ನೇ ಸಾಲಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ 7ದಿನಗಳ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ವಿರಾಜಪೇಟೆಯ ಸಂತ ಅನ್ನಮ್ಮ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಪ್ರತಿಮಾ ರೈ ಕಾಯ೯ಕ್ರಮದಲ್ಲಿ ಮಾತನಾಡಿ , ಎನ್‍ಎಸ್‍ಎಸ್ ಶಿಬಿರಾರ್ಥಿ ಗಳು ಶಿಬಿರದಲ್ಲಿ ಮೈ ಗೂಡಿಸಿಕೊಂಡಿರುವ ಜೀವನಮೌಲ್ಯ, ಸಹಕಾರ ಮನೋಭಾವ, ಶಿಸ್ತು ಮೊದಲಾದ ಗುಣಗಳನ್ನು ತಮ್ಮ ಜೀವನದ ಭಾಗವಾಗುವಂತೆ ಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಸಮಾಜದಲ್ಲಿ ಪ್ರತಿಯೊಬ್ಬರೂ ಪ್ರತಿ ದಿನ, ಪ್ರತಿ ಕ್ಷಣ ಪ್ರತಿಯೊಂದರಿಂದ ಕಲಿಯುವುದು ಬಹಳಷ್ಟಿದೆ. ಹೀಗಾಗಿ ವಿದ್ಯಾರ್ಥಿಗಳು ಸದಾ ಅಧ್ಯಯನ ಶೀಲರಾಗಿ ಅಪರಿಪೂರ್ಣತೆ ಯಿಂದ ಪರಿಪೂರ್ಣತೆ ಕಡೆಗೆ ಸಾಗುವಂತೆ ಪ್ರತಿಮಾ ರೈ ಸಲಹೆ ನೀಡಿದರು.
ವೇದಿಕೆಯಲ್ಲಿ ಶಿಬಿರದ ನಿರ್ದೇಶಕರು ಹಾಗೂ ಸಂಸ್ಥೆ ಯ ಪ್ರಾಂಶುಪಾಲ ಸಿ.ಜಿ. ಮಂದಪ್ಪ, ಹರದೂರು ಗ್ರಾ.ಪಂ ಅಧ್ಯಕ್ಷೆ ಉಷಾ, ಕಾರ್ಯಕ್ರಮಾಧಿಕಾರಿ ಎನ್.ಎನ್. ಮನೋಹರ್, ಸಹ ಶಿಬಿರಾಧಿಕಾರಿ ಪ್ರಪುಲ್ಲ ಕುಮಾರಿ, ಹಿರಿಯ ಉಪನ್ಯಾಸಕ ರಾಜಸುಂದರಂ, ಶೀಲಾ ಸಂಸ್ಥೆಯ ಬೋಧಕ ಬೋಧಕೇತರ ವರ್ಗ ಶಿಭಿರಾರ್ಥಿಗಳು ಹಾಜರಿದ್ದರು.