ಮಡಿಕೇರಿ ನ.4 : ಕೊಡಗು ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ ಪ್ರತೀ ತಿಂಗಳಿಗೆ 500 ಯೂನಿಟ್ ರಕ್ತದ ಅಗತ್ಯವಿದ್ದು, ಹೀಗಾಗಿ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಜಿಲ್ಲೆಯಲ್ಲಿ ಅಗತ್ಯ ಇರುವವರಿಗೆ ರಕ್ತದ ಕೊರತೆ ಉಂಟಾಗದಂತೆ ಗಮನ ಹರಿಸಬೇಕು ಎಂದು ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕೆ.ಸಿ.ಕರುಂಬಯ್ಯ ಹೇಳಿದ್ದಾರೆ.
ಮಡಿಕೇರಿ ಸಕಾ೯ರಿ ಪ್ರಥಮ ದಜೆ೯ ಕಾಲೇಜಿನಲ್ಲಿ ಯೂತ್ ರೆಡ್ ಕ್ರಾಸ್ ಘಟಕ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಘ, ಮಡಿಕೇರಿಯ ಭೋದಕ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಕೊಡಗು ಘಟಕಧ ವತಿಯಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೆಂಪು ರಕ್ತಕಣಗಳ ಅಗತ್ಯತೆ ಹಿಂದೆಂದಿಗಿಂತ ಹೆಚ್ಚಾಗಿದೆ. ಅಂತೆಯೇ ಪ್ರಸವ ಸಂದಭ೯ದಲ್ಲಿಯೂ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಬೇಡಿಕೆ ಕಂಡುಬರುತ್ತಿದೆ. ಪ್ರಸ್ತುತ ರಕ್ತನಿಧಿ ಕೇಂದ್ರದಲ್ಲಿ 200 ಯೂನಿಟ್ ಗಳಷ್ಟು ರಕ್ತ ಲಭ್ಯವಿದೆಯಾದರೂ ತುತು೯ ಸಂದಭ೯ದಲ್ಲಿ ರೋಗಿಗಳಿಗೆ ನೀಡಲು ರಕ್ತದ ಸಂಗ್ರಹ ಮತ್ತಷ್ಟು ಪ್ರಮಾಣದಲ್ಲಿ ಅಗತ್ಯವಿದೆ ಎಂದು ಡಾ.ಕರುಂಬಯ್ಯ ಹೇಳಿದರು. ವಾಹನ ಅಪಘಾತ ಪ್ರಮಾಣ ಕೂಡ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಅಪಘಾತಕ್ಕೀಡಾದ ವ್ಯಕ್ತಿಗಳಿಗೂ ರಕ್ತದ ತೀವ್ರ ಅಗತ್ಯ ಕಂಡು ಬರುತ್ತಿದೆ. ಈ ಎಲ್ಲಾ ಹಿನ್ನಲೆಯಲ್ಲಿ ದಾನಿಗಳು ಹೆಚ್ಚಿನ ಪ್ರಮಾಣದಲ್ಲಿ ರಕ್ತ ನೀಡಲು ಮುಂದಾಗುವಂತೆ ಮನವಿ ಮಾಡಿದರು.
ರೆಡ್ ಕ್ರಾಸ್ ಕೊಡಗು ಘಟಕದ ಸಭಾಪತಿ ಬಿ.ಕೆ.ರವೀಂದ್ರ ರೈ ಮಾತನಾಡಿ, ಎಲ್ಲಾ ದಾನಕ್ಕಿಂತಲೂ ಅಮೂಲ್ಯವಾದ ರಕ್ತದಾನ ಮಾಡಲು ಮುಂದಾಗಿರುವ ಕಾಲೇಜು ವಿದ್ಯಾಥಿ೯ಗಳ ಚಿಂತನೆ ಶ್ಲಾಘನೀಯವಾಗಿದೆ. ಮಹಾದಾನದಂತಿರುವ ರಕ್ತದಾನವನ್ನು ಪ್ರತೀಯೋವ೯ರೂ ಮಾಡುವ ಮೂಲಕ ರಕ್ತ ಅಗತ್ಯ ಇರುವವರಿಗೆ ನೆರವಾಗಬೇಕು ಎಂದು ಹೇಳಿದರು.
ವಾಹನ ಅಪಘಾತ ಸೇರಿದಂತೆ ವಿವಿಧ ರೀತಿಯಲ್ಲಿ ಅಗತ್ಯತೆ ಉಳ್ಳವರಿಗೆ ರಕ್ತವನ್ನು ನೀಡುವ ನಿಟ್ಟಿನಲ್ಲಿ ರಕ್ತದಾನಿಗಳು ಮುಂದಾಗಬೇಕೆಂದು ಹೇಳಿದ ರವೀಂದ್ರ ರೈ, ರಕ್ತದಾನ ಮಾಡುವಿಕೆ ಅತ್ಯಂತ ಸರಳವಾಗಿದ್ದು, ಈ ನಿಟ್ಟಿನಲ್ಲಿ ರಕ್ತದಾನಕ್ಕೆ ಹೆಚ್ಚಿನವರು ಮುಂದಾಗುವ ಮೂಲಕ ರಕ್ತದ ಕೊರತೆಯಿಂದ ಹೆಚ್ಚಿನ ಸಾವುನೋವುಗಳು ಆಗುವುದನ್ನು ತಪ್ಪಿಸಬೇಕೆಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಪ್ರಸನ್ನ, ಯೂತ್ ರೆಡ್ ಕ್ರಾಸ್ ನ ಕಾಯ೯ಕ್ರಮ ಅಧಿಕಾರಿ ಡಾ.ಎಂ.ಎಂ.ಪ್ರಕಾಶ್, ರೆಡ್ ಕ್ರಾಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಎಚ್.ಟಿ., ಪ್ರಧಾನ ಕಾಯ೯ದಶಿ೯ ಎಚ್.ಆರ್.ಮುರಳೀಧರ್ , ಯೂತ್ ರೆಡ್ ಕ್ರಾಸ್ ನಿದೇ೯ಶಕ ಎಂ.ಧನಂಜಯ್ , ರೆಡ್ ಕ್ರಾಸ್ ನಿದೇ೯ಶಕರಾದ ಕೌಸರ್, ರಂಜಿತ್ ಕವಲಪಾರ, ಅಶ್ರಫ್ , ಶಿಲ್ಪ ರೈ ಮತ್ತಿತರರು ಹಾಜರಿದ್ದರು.
ವಿದ್ಯಾಥಿ೯ನಿ ತ್ರಿವೇಣಿ ವಂದಿಸಿದರು. ಕೌಸರ್ ನಿರೂಪಿಸಿದರು.