ಮಡಿಕೇರಿ ನ.4 : ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಷನ್ ದಕ್ಷಿಣ ಪ್ರಾಂತ, ಮಡಿಕೇರಿ ವಿಭಾಗ ಹಾಗೂ ಮಡಿಕೇರಿ ಸೇವಾ ಭಾರತೀ ಸಂಯುಕ್ತ ಆಶ್ರಯದಲ್ಲಿ ನ.5 ರಂದು “ಕಾವೇರಿ ಸ್ವಾಸ್ಥ್ಯ ಸೇವಾಯಾತ್ರಾ” ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ವಾಲ್ನೂರು ಬಾಳೆಗುಂಡಿ ಗಿರಿಜನ ಕಾಲೋನಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದ 1 ಗಂಟೆಯವರೆಗೆ ನಡೆಯಲಿರುವ ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ ತಪಾಸಣೆ, ಬಿಎಂಐ, ಪೌಷ್ಟಿಕಾಂಶದ ಮೌಲ್ಯ ಮಾಪನ, ಉಚಿತ ಔಷಧಿಗಳು, ಆರೋಗ್ಯ ಶಿಕ್ಷಣ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಶಿಬಿರ ಆಯೋಜಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಡಾ.ಹೆಚ್.ಜಿ.ಶ್ರೀಕಾಂತ್-99809 32300, ಡಾ.ಎಸ್.ಮಂಜುನಾಥ್-95916 79559 ಸಂಪರ್ಕಿಸಬಹುದಾಗಿದೆ.









