ಸೋಮವಾರಪೇಟೆ ನ.7 : ಕೃಷಿ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಕೃಷಿ ಯಾಂತ್ರೀಕರಣ
ಮತ್ತು ತುಂತುರು ನೀರಾವರಿ ಘಟಕಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಹ ರೈತರು ಅರ್ಜಿ ಸಲ್ಲಿಸುವಂತೆ ಕೃಷಿ ಇಲಾಖೆ ತಿಳಿಸಿದೆ.
ಕೃಷಿ ಪರಿಕರಗಳಾದ ಕಳೆಕೊಚ್ಚುವ ಯಂತ್ರ, ಡಿಸೇಲ್ ಪಂಪ್ ಸೆಟ್, ಪವರ್ ಸ್ಟೇಯರ್‍ಗಳಿಗೆ ಪಿಎಂಕೆಎಸ್‍ವೈ -1 ಯೋಜನೆಯಡಿ ಅರ್ಜಿಗಳನ್ನು ತಮ್ಮ ಸ್ಥಳಕ್ಕೆ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಿಗೆ ನೀಡಬಹುದಾಗಿದೆ.
ತುಂತುರು ನೀರಾವರಿ ಘಟಕಗಳನ್ನ ಅಳವಡಿಸಿರುವ ರೈತರು, ಹೊಸದಾಗಿ ಕೊಳವೆ ಬಾವಿಗಳನ್ನು ಕೃಷಿಹೊಂಡಗಳನ್ನು ತೆಗೆಯಲು ಇಲಾಖೆಯಿಂದ ಶೇ.50ರ ವರೆಗೆ ಸಹಾಯಧನವನ್ನು ನೀಡಲಾಗುವುದು ಎಂದು ಇಲಾಖೆಯ ಸಹಾಯಕ ನಿರ್ದೇಶಕ ಯಾದವ್ ಬಾಬು ತಿಳಿಸಿದ್ದಾರೆ.









