ನಾಪೋಕ್ಲು ನ.7 : ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಆರೋಗ್ಯದ ಜೊತೆಗೆ ಮಾನಸಿಕ ಸ್ಥಿತಿ ಉತ್ತಮಗೊಳ್ಳಲು ಸಹಕಾರಿಯಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ನಾಪೋಕ್ಲುವಿನ ದಿ ರೋವ್ ಕೂರ್ಗ್ ಮತ್ತು ರಘುರಾಜ್ ಸ್ಪೋರ್ಟ್ಸ್ ಮ್ಯಾನೇಜ್ ಮೆಂಟ್ ವತಿಯಿಂದ ಎರಡು ದಿನಗಳ ಕಾಲ ರೋವ್ ಕೂರ್ಗ್ ನಾಪೋಕ್ಲು ವಿನ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಮುಕ್ತ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದ ಸಮಾರೋಪ ಸಮಾರಂಭಕ್ಕೂ ಮೊದಲು ಪಾಲ್ಗೊಂಡು ಅವರು ಮಾತನಾಡಿದರು. ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತಹ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ನಾಪೋಕ್ಳು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ ಮಾತನಾಡಿ, ಶಟಲ್ ಬ್ಯಾಡ್ಮಿಂಟನ್ ಕ್ರೀಡೆಯ ಹುಟ್ಟು ಹಾಗೂ ನಡೆದು ಬಂದ ದಾರಿಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿ, ಕ್ರೀಡಾಪಟುಗಳಿಗೆ ಇದರ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಮುಂದೆ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಲಿ ಎಂದು ಆಶಿಸಿದರು.
ಕಾಫಿ ಬೆಳೆಗಾರ ಬಿದ್ದಾಟ0ಡ ಜೀವನ್ ಕಾರ್ಯಪ್ಪ ಮಾತನಾಡಿ, ತಮ್ಮ ಅನಿಸಿಕೆ ವ್ಯಕ್ತಪಡಿಸಿ ಕ್ರೀಡಾಪಟುಗಳಿಗೆ ಹಾಗೂ ಆಯೋಜಿಸಿದ ಸಂಸ್ಥೆಗೆ ಶುಭ ಹಾರೈಸಿದರು.
ಉದ್ಯಮಿ ಮಂಡೀರ ಜಯ ದೇವಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಹಾಗೂ ನಾಪೋಕ್ಲುವಿನ ಕೊಡವ ಸಮಾಜದ ಮಾಜಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಸರ್ವೆ ಆಫ್ ಇಂಡಿಯಾದ ನಿವೃತ್ತ ಉದ್ಯೋಗಿ ಕೇಟೋಳಿರ ಎಸ್.ಕುಟ್ಟಪ್ಪ , ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಹಾಗೂ ನಾಪೋಕ್ಲುವಿನ ಕೃಷಿ ಪತ್ತಿ ಸಹಕಾರ ಸಂಘದ ಅಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ದಿ ರೂವ್ ಕೂರ್ಗ್ ಮಾಲೀಕ ಮಂಡೀರ ಸರೋಜ ದೇವಯ್ಯ, ತರಬೇದಾರ ರಘುರಾಜ್ ಹಾಜರಿದ್ದರು.
ವೇದಿಕೆಯಲ್ಲಿದ್ದ ಗಣ್ಯರು ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಮುಕ್ಕಾಟಿರ ವಿನಯ್ ಸ್ವಾಗತಿಸಿದರು. ಬಾಳೆಯಡ ದಿವ್ಯ ಮಂದಪ್ಪ ಕಾರ್ಯಕ್ರಮ ನಿರೂಪಿಸಿದರು. ಅಂಕುರ್ ಪಬ್ಲಿಕ್ ಶಾಲೆಯ ಮುಖ್ಯಸ್ಥೆ ರತ್ನ ಚರ್ಮಣ ವಂದಿಸಿದರು.
ಪಂದ್ಯಾವಳಿಯಲ್ಲಿ 156 ಆಟಗಾರರು ಭಾಗವಹಿಸಿದ್ದು, ತೀರ್ಪುಗಾರರಾಗಿ ಪೊರ್ಕೋoಡ ಸುನಿಲ್, ಬೊಪ್ಪೇರ ಜಯ, ಪೆಮ್ಮುಡಿಯಂಡ ವೇಣು ಅಪ್ಪಣ್ಣ , ಕುಲ್ಲೇಟಿರ ಶಾಂತ, ಕುಲ್ಲೇಟಿರ ದೇವಿ, ಆದಿ, ಕನ್ನಂಬೀರ ಸುಧಿ ತಿಮ್ಮಯ್ಯ ಕಾರ್ಯನಿರ್ವಹಿಸಿದರು.
ವಿಜೇತರು: 9 ವರ್ಷದ ಒಳಗಿನವರು-ಸಿಂಗಲ್ಸ್ ವಿಜೇತರು ಶರಣ್ಯ, 12 ವರ್ಷದೊಳಗಿನ ಬಾಲಕಿಯರು-ಸಿಂಗಲ್ಸ್ ಅಂಶಿಕ, ಹತ್ತು ವರ್ಷದೊಳಗಿನ ಬಾಲಕರ ಸಿಂಗಲ್ಸ್ ಅರ್ಥವ್ ಅಚ್ಚಪ್ಪ, 12 ವರ್ಷದೊಳಗಿನ ಬಾಲಕರ ಸಿಂಗಲ್ಸ್ ವಿಶಾಲ್ ಉತ್ತಪ್ಪ, ಹದಿನಾರು ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ಮುಕ್ತ ಗಿರೀಶ್,
ಹದಿನಾಲ್ಕು ವರ್ಷದೊಳಗಿನ ಬಾಲಕರ ಸಿಂಗಲ್ಸ್ ವಿಶಾಲ್ ಉತ್ತಪ್ಪ.
12 ವರ್ಷದೊಳಗಿನ ಬಾಲಕರ ಡಬಲ್ಸ್ ವಿಶಾಲ್ ಉತ್ತಪ್ಪ ಮತ್ತು ಅಥರ್ವ ಕೆ. ಗುಡಿ, 14 ವರ್ಷದೊಳಗಿನ ಬಾಲಕರು- ಡಬಲ್ಸ್ ವಿಶಾಲ್ ಉತ್ತಪ್ಪ ಮತ್ತು ಅಥರ್ವ ಕೆ. ಗುಡಿ, 14 ವರ್ಷದೊಳಗಿನ ಬಾಲಕರ ಸಿಂಗಲ್ಸ್
ವಿಜೇತರು- ವಿಶಾಲ್ ಉತ್ತಪ್ಪ, 16 ವರ್ಷದೊಳಗಿನ ಬಾಲಕರ ಡಬಲ್ಸ್ ಮೂಕಂಡ ಅಯ್ಯಪ್ಪ ಮತ್ತು ಕೊಂಗಂಡ ಆಕಾಶ್, 16 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಮೂಕಂಡ ಅಯ್ಯಪ್ಪ,
20-30 ವಯೋಮಾನದ ಪುರುಷರ ಡಬಲ್ಸ್ ಗಜ ಮತ್ತು ಹರೀಶ್, 30-40 ವಯೋಮಾನದ ಪುರುಷರ ಡಬಲ್ಸ್ ವಿಜಯ್ ಮತ್ತು ದರ್ಶನ್, 40-50 ವಯೋಮಾನದ ಪುರುಷರ ಡಬಲ್ಸ್ ಸುಳ್ಳಿಮಾಡ ದೀಪಕ್ ಮತ್ತು ನಂಬುಡಮಾಡ ಅಪ್ಪಣ್ಣ, ಐವತ್ತು ಮೇಲ್ಪಟ್ಟ ವಯೋಮಾನದ ಪುರುಷರ ಡಬಲ್ಸ್ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಮತ್ತು ಬೊಪ್ಪೆರ ಜಯ, 20-30 ವಯೋಮಾನದ ಪುರುಷರು- ಸಿಂಗಲ್ಸ್ ಹರೀಶ್, ಬೆಸ್ಟ್ ಪ್ಲೇಯರ್ ಇನ್ ರೋವ್ ಅಕಾಡೆಮಿ ರೋಹನ್ ರೈ, ಅಪ್ ಕಮಿಂಗ್ ಪ್ಲೇಯರ್ ಇನ್ ರೋವ್ ಎಕಾಡೆಮಿ ರಾನ್.
ವರದಿ : ದುಗ್ಗಳ ಸದಾನಂದ