ಮಡಿಕೇರಿ ನ.9 : ಭಾರಿ ಮಳೆಯಿಂದಾಗಿ ಚೆಂಬು ಗ್ರಾಮದ ಡಬ್ಬಡ್ಕ ಭಾಗದ ಅಡ್ಡ ಹೊಳೆ ಸೇತುವೆಗೆ ಹಾನಿ ಆಗಿ ಸಂಚರಿಸಲು ಸಂಕಷ್ಟ ಪಡುತ್ತಿದ್ದ ಗ್ರಾಮಸ್ಥರ ಸಮಸ್ಯೆಗೆ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಸ್ಪಂದಿಸಿದ್ದು, ಶಾಸಕರ ಬದ್ಧತೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಚೆಂಬು ಗ್ರಾಮದ ಡಬ್ಬಡ್ಕ ಭಾಗದ ಅಡ್ಡ ಹೊಳೆ ಸೇತುವೆಗೆ ಹಾನಿ ಆಗಿ ಸಂಚಾರ ಸಂಪೂರ್ಣ ಕಡಿತಗೊಂಡಿತ್ತು. ವಿಷಯ ತಿಳಿದ ಶಾಸಕ ಎ.ಎಸ್.ಪೊನ್ನಣ್ಣ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ, ಹಾನಿಯಾದ ಕಡೆ ದುರಸ್ತಿ ಮಾಡಿಸುವ ಮೂಲಕ ಕೆಲವೇ ಗಂಟೆಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವಲ್ಲಿ ಮುತುವರ್ಜಿ ವಹಿಸಿದ್ದಾರೆ. ಮಳೆ ಕಡಿಮೆ ಆದ ಕೂಡಲೇ ಹಾನಿಗೊಳಗಾದ ಭಾಗವನ್ನು ಸಂಪೂರ್ಣ ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದಾರೆ.
ಶಾಸಕರ ಈ ಕ್ಷೇತ್ರ ಕಾರ್ಯಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಧನ್ಯವಾದ ಅರ್ಪಿಸಿದ್ದಾರೆ.