ಸುಂಟಿಕೊಪ್ಪ ನ.10 : ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲ್ಲೂಕು ಸಮಿತಿಗೆ ಟಿ.ಕೆ.ಸಾಯಿಕುಮಾರ್ ಅವರು ತಮ್ಮ ತಂದೆ ಟಿ.ಕೆ.ಕುಮಾರನ್ ಹಾಗೂ ತಾಯಿ ಕೆ.ಎನ್.ಭಾರತಿ ಅವರ ನೆನಪಿಗಾಗಿ ಘೋಷಿಸಿದ್ದ 25ಸಾವಿರ ರೂ.ಗಳ ದತ್ತಿನಿಧಿಯನ್ನು ವಿತರಿಸಿದರು.
ಸುಂಟಿಕೊಪ್ಪದಲ್ಲಿ ನಡೆದ ಈ ಸಾಲಿನ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಟಿ.ಕೆ.ಸಾಯಿಕುಮಾರ್ ಅವರು ಘೋಷಿಸಿದ್ದ ದತ್ತಿನಿಧಿಯನ್ನು ಅತ್ತೂರುನಲ್ಲೂರು (ಕಂಬಿಬಾಣೆ)ಶಾಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಬಿ.ಸಿ.ದಿನೇಶ್, ಗೌರವಾಧ್ಯಕ್ಷ ಕೆ.ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಬಿ.ವಿನ್ಸೆಂಟ್, ನಿರ್ದೇಶಕರಾದ ಕೆ.ಹೆಚ್.ಶಿವಣ್ಣ, ಸಿಲ್ವೆಸ್ಟರ್ ಡಿಸೋಜಾ, ಅಲ್ಫ್ರೆಡ್ ಡಿಸೋಜಾ ಅವರುಗಳಿಗೆ ಚೆಕ್ ಹಸ್ತಾಂತರಿಸಿದರು.








