ಮಡಿಕೇರಿ ನ.10 : ಕುಶಾಲನಗರದ ಬಿ.ಎಂ ರಸ್ತೆಯ ನಿವಾಸಿ ಹೃದಯ ರೋಗ ತಜ್ಞರಾದ ಡಾ.ಕಿರಣ್ ಕಾಳಪ್ಪ ಅವರು ಲೆಫ್ಟಿನೆಂಟ್ ಕರ್ನಲ್ ಹುದ್ದೆಯಿಂದ ಕರ್ನಲ್ ಆಗಿ ಮುಂಬಡ್ತಿ ಹೊಂದಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿರುವ ಕಮಾಂಡೋ ಆಸ್ಪತ್ರೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದ ಡಾ.ಕಿರಣ್ ಇದೀಗ ಮುಂಬಡ್ತಿ ಹೊಂದಿ ಕೊಲ್ಕತ್ತಾದ ಕಮಾಂಡೋ ಆಸ್ಪತ್ರೆಯಲ್ಲಿ ಹೃದಯ ರೋಗ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರ ಪತ್ನಿ ಡಾ.ಕಾವ್ಯಶ್ರೀ ದಂತರೋಹ ತಜ್ಞರಾಗಿದ್ದಾರೆ. ಡಾ.ಕಿರಣ್ ಕಾಳಪ್ಪ ಕುಶಾಲನಗರ ಚೌಡ್ಲು ಕಾಳಪ್ಪ ಹಾಗೂ ಕಾವೇರಿ ಅವರ ಪುತ್ರ.









