ಮಡಿಕೇರಿ ನ.10 : ರಾಜ್ಯ ಸಕಾ೯ರ ಜನತೆಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಗುಣಮಟ್ಟ ಹೆಚ್ಚಿಸುವ ಕಾಯ೯ಕ್ಕೆ ಆದ್ಯತೆ ನೀಡಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಹೇಳಿದ್ದಾರೆ.
ನಗರದ ಶ್ರೀ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪದ ಶತಮಾನ ಭವನದಲ್ಲಿ ನೀಮಾ ಸಂಸ್ಥೆಯಿಂದ ಆಯೋಜಿತ ರಾಷ್ಟ್ರೀಯ 8ನೇ ಆಯುವೇ೯ದ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಸಂರಕ್ಷಣೆಯಲ್ಲಿ ಆಲೋಪತಿ ಮತ್ತು ಆಯುವೇ೯ದ ಚಿಕಿತ್ಸೆಗಳು ಬಹುಮುಖ್ಯ ಪಾತ್ರ ವಹಿಸಿದೆ. ಪುರಾತನ ಕಾಲದ ಐತಿಹ್ಯ ಹೊಂದಿರುವ ಆಯುವೇ೯ದ ಮತ್ತು ಅಲೋಪತಿ ಔಷಧೀಯ ಪದ್ದತಿಗಳ ಬಗ್ಗೆ ಆಗಿಂದಾಗ್ಗೆ ಚಚೆ೯ಗಳು ನಡೆಯುತ್ತಲೇ ಇದೆ. ಹೀಗಿದ್ದರೂ ಆಯುವೇ೯ದ ಮತ್ತು ಅಲೋಪತಿ ಎರಡೂ ಪದ್ದತಿಗಳನ್ನು ಅಗತ್ಯವಿದ್ದಷ್ಟು ಬಳಸಿಕೊಂಡು ಪ್ರತೀಯೋವ೯ರು ತಮ್ಮ ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ಗಮನ ಹರಿಸಲು ಸಾಧ್ಯ ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಬಹುತೇಕ ಮಂದಿ ಒತ್ತಡದ ಜೀವನ ಕ್ರಮದಿಂದಾಗಿ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಎಲ್ಲಕ್ಕಿಂತ ಮೊದಲು ಮಾನಸಿಕವಾಗಿ ಪ್ರತೀಯೋವ೯ರು ಸಂತೋಷದಿಂದ ಇರುವುದು ಮುಖ್ಯವಾಗುತ್ತದೆ. ಮನಸ್ಸಿನ ಸಂತೋಷದಿಂದ ಪ್ರತೀಯೋವ೯ರು ಉತ್ತಮ ಆರೋಗ್ಯ ಸಂಪಾದಿಸಲು ಸಾಧ್ಯವಾಗಲಿದೆ ಎಂದು ಡಾ.ಮಂಥರ್ ಗೌಡ ಅಭಿಪ್ರಾಯಪಟ್ಟರು.
ನಗರಸಭೆಯ ಅಧ್ಯಕ್ಷೆ ಅನಿತಾಪೂವಯ್ಯ ಮಾತನಾಡಿ,ಹಳೇ ಕಾಲದಿಂದಲೂ ಮನೆಯಲ್ಲಿ ಬಳಸುವ ಅರಶಿಣ, ಹಳದಿ, ಜೇನುತುಪ್ಪ, ಜೀರಿಗೆ, ಬೆಲ್ಲದಂಥ ಅನೇಕ ಪದಾಥ೯ಗಳು ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ಮುಖ್ಯ ಪಾತ್ರ ವಹಿಸಿದ್ದವು. ಕೋವಿಡ್ ಸಂದಭ೯ದಲ್ಲಿ ಆಯುವೇ೯ದದ ಮಹತ್ವ ಇಡೀ ಜಗತ್ತಿಗೆ ತಿಳಿಯಿತು. ಯಾರೇ ಆದರೂ ಆಹಾರ ಪದ್ದತಿಯನ್ನು ಉತ್ತಮವಾಗಿರಿಸಿಕೊಂಡು, ಜೀವನಶೈಲಿಯನ್ನು ಸರಿದೂಗಿಸಿಕೊಂಡದ್ದೇ ಆದಲ್ಲಿ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ನೀಮಾ ಸಂಸ್ಥೆಯ ಕೊಡಗು ಜಿಲ್ಲಾಧ್ಯಕ್ಷ ಡಾ. ಎ.ಆರ್.ರಾಜಾರಾಮ್ ಮಾತನಾಡಿ, ಕೊಡಗಿನಲ್ಲಿ ಕೂಡ ಆಯುವೇ೯ದ ಔಷಧ ಪದ್ದತಿ ಜನರಿಂದ ಮನ್ನಣೆ ಪಡೆಯುತ್ತಿರುವ ಈ ದಿನಗಳಲ್ಲಿ ಸಕಾ೯ರ ನೀಮಾ ಸಂಸ್ಥೆ ಬಹಳ ವಷ೯ಗಳ ಬೇಡಿಕೆಯಾಗಿರುವ ಸುಸಜ್ಜಿತ ಆಯುವೇ೯ದ – ಯೋಗ ಭವನಕ್ಕೆ ಕನಿಷ್ಟ 5 ಎಕ್ರೆ ಜಾಗ ಒದಗಿಸುವಂತೆ ಮನವಿ ಮಾಡಿದರು. ಯೋಗಭವನ ನಿಮಾ೯ಣವಾದಲ್ಲಿ ದೇಶವಿದೇಶಗಳ ಪ್ರವಾಸಿಗರೂ ಕೂಡ ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಅವಕಾಶ ದೊರಕುತ್ತದೆ ಎಂದೂ ಡಾ.ರಾಜಾರಾಮ್ ಅಭಿಪ್ರಾಯಪಟ್ಟರು. ಸಕಾ೯ರದ ಅಧೀನದಲ್ಲಿನ ಆರೋಗ್ಯ ಇಲಾಖೆಯ ಸಹಾಯವಾಣಿಯಲ್ಲಿ ಆಯುವೇ೯ದ ಪದ್ದತಿಯ ವೈದ್ಯರಿಗೂ ಸೇವೆ ದೊರಕಿಸುವಂತಾಗಲು ಅವಕಾಶ ಕಲ್ಪಿಸಬೇಕು ಎಂದೂ ರಾಜಾರಾಮ್ ಶಾಸಕರಿಗೆ ಮನವಿ ಸಲ್ಲಿಸಿದರು.
ಕಾಯ೯ಕ್ರಮದಲ್ಲಿ ನೀಮಾ ಕೊಡಗು ಘಟಕದ ಸ್ಥಾಪಕಾಧ್ಯಕ್ಷ ಕೊಡ್ಲಿಪೇಟೆಯ ಡಾ. ಸಿ.ಆರ್. ಉದಯಕುಮಾರ್ ಅವರನ್ನು ನೀಮಾ ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಡಾ. ನಡಿಬೈಲು ಉದಯಕುಮಾರ್ ಸ್ವಾಗತಿಸಿ, ಡಾ.ಸೌಮ್ಯ ಗಣರಾಜ್ ನಿರೂಪಿಸಿದ ಕಾಯ೯ಕ್ರಮದಲ್ಲಿ ಡಾ. ಪದ್ಮನಾಭ್ ವಂದಿಸಿದರು. ಜಿಲ್ಲಾ ಆಯುಶ್ ಅಧಿಕಾರಿ ಡಾ. ಸಿ. ರೇಣುಕಾ ದೇವಿ, ನಗರಸಭೆ ಸದಸ್ಯ ಬಿ.ವೈ.ರಾಜೇಶ್, ನೀಮಾ ಸಂಸ್ಥೆಯ ಜಿಲ್ಲಾ ಕಾಯ೯ದಶಿ೯ ಡಾ.ಶ್ಯಾಮ್ ಪ್ರಸಾದ್ ಹಾಜರಿದ್ದರು.
ಇದೇ ಸಂದಭ೯ ರಾಷ್ಟ್ರೀಯ ಆಯುವೇ೯ದ ದಿನಾಚರಣೆ ಪ್ರಯುಕ್ತ ಸುಳ್ಯದ ಕೆವಿಜಿ ಆಯುವೇ೯ದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ತಂಡದಿಂದ ಉಚಿತ ಆರೋಗ್ಯ ತಪಾಸಣೆ, ಸಲಹೆ, ಚಿಕಿತ್ಸಾ ಶಿಬಿರ ಆಯೋಜಿಸಲ್ಪಟ್ಟಿತ್ತು, ಶಿಬಿರಕ್ಕೆ ಮಂಗಳೂರು ವಿಭಾಗದ ಆರೋಗ್ಯ ಭಾರತಿಯ ಸಹಯೋಗ ನೀಡಲಾಗಿತ್ತು.
ಕಾಯ೯ಕ್ರಮಕ್ಕೂ ಮುನ್ನ ಧನ್ವಂತರಿ ಪೂಜೆ ಆಯೋಜಿಸಲ್ಪಟ್ಟಿತ್ತು. ಆಯುವೇ೯ದ ದಿನಾಚರಣೆ ಅಂಗವಾಗಿ ಆಯೋಜಿತ ಚಿತ್ರಕಲಾ, ಪೋಸ್ಟರ್ ರಚಿಸುವ ಸ್ಪಧೆ೯ಯಲ್ಲಿ ವಿಜೇತ ವಿದ್ಯಾಥಿ೯ಗಳಿಗೆ ಶಾಸಕರು ಬಹುಮಾನ ವಿತರಿಸಿದರು.









