ಮಡಿಕೇರಿ ನ.11 : ಕರಿಕೆ ಗ್ರಾಮದ ಆನೆಪಾರೆ ಗ್ರಾಮದಲ್ಲಿ ಕಾಡಾನೆ ಹಾವಳಿಯಿಂದ ಕೃಷಿ ಫಸಲು ನಷ್ಟವಾಗುತ್ತಿರುವ ಹಿನ್ನೆಲೆ ರೈತರು ಕಂಗಾಲಾಗಿದ್ದಾರೆ.
ಗ್ರಾಮದ ನಿವಾಸಿಗಳಾದ ರಧೀಶ್, ಜೋಸೆಫ್, ಮೋಹನ ಹಾಗೂ ಮನೋಜ್ ಅವರ ತೋಟಕ್ಕೆ ನುಗ್ಗಿ ಅಡಿಕೆ, ಕಾಫಿ, ತೆಂಗುಗಳನ್ನು ಧ್ವಂಸಗೊಳಿಸಿದೆ.
ಪ್ರತೀ ವರ್ಷ ಆನೆದಾಳಿಯಿಂದ ರೈತರು ಕಂಗಾಲಾಗಿದ್ದು, ಅರಣ್ಯ ಅಧಿಕಾರಿಗಳು ಆನೆಗಳನ್ನು ಕಾಡಿಗೆಗಟ್ಟಬೇಕು ಮತ್ತು ಆನೆ ಕಂದಕಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದ ಗ್ರಾಮಸ್ಥರು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಡಳಿತ ಹಾಗೂ ಸಂಬಂಧಿಸಿ ಇಲಾಖೆಯನ್ನು ಒತ್ತಾಯಿಸಿದ್ದಾರೆ.








