ಮಡಿಕೇರಿ ನ.12 : ಆದಿಮಸಂಜಾತ ಕೊಡವ ಜನಾಂಗಕ್ಕೆ ಸಂವಿಧಾನದ ಭದ್ರತೆಯ ಅಗತ್ಯವಿದೆ. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡುವುದು ಮತ್ತು ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸುವುದು ಅನಿವಾರ್ಯವಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದ್ದಾರೆ.
ಸಿಎನ್ಸಿ ವತಿಯಿಂದ ನೆಲಜಿ ನಾಡ್ ಮಂದ್ ನಲ್ಲಿ ನಡೆದ ಪಾದಯಾತ್ರೆ ಮತ್ತು ಕೊಡವ ಜನಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಾರತದ ಸಂವಿಧಾನ ಪರಿಶೀಲನಾ ಆಯೋಗವು ಶಿಫಾರಸ್ಸು ಮಾಡಿರುವ ವರದಿಯನ್ವಯ ಕೊಡವ ಲ್ಯಾಂಡ್ ಸ್ವಯಂ ಶಾಸನದ ಜನ್ಮ ಭೂಮಿಯನ್ನು ರಚಿಸಬೇಕು. ಸಂವಿಧಾನದಲ್ಲಿ ರೇಸ್/ಮೂಲ ವಂಶಸ್ಥ ಜನಾಂಗಕ್ಕೆ ಯಾವುದೇ ವಿಶೇಷ ಪರಿಚ್ಛೇದಗಳ ಷರತ್ತು ಇಲ್ಲದಿರುವುದರಿಂದ ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸುವುದು ಅನಿವಾರ್ಯವಾಗಿದೆ. ಆದ್ದರಿಂದ ಉಚ್ಚ ನ್ಯಾಯಾಲಯದ ಆದೇಶದಂತೆ, ಕೊಡವ ಜನಾಂಗದ ನ್ಯಾಯಯುತ, ಸೂಕ್ಷ್ಮ, ಸಮಗ್ರ ಕುಲಶಾಸ್ತ್ರ ಅಧ್ಯಯನ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಕೊಡವ ಕಸ್ಟಮರಿ ಜನಾಂಗೀಯ “ಸಂಸ್ಕಾರ ಗನ್” ಹಕ್ಕುಗಳನ್ನು ಸಿಖ್ಖರ “ಕಿರ್ಪಾನ್” ಗೆ ಸಮಾನವಾಗಿ ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಕೊಡವರ “ಧಾರ್ಮಿಕ ಸಂಸ್ಕಾರ”ವೆಂದು ರಕ್ಷಿಸಬೇಕು.
ಮಾತೃ ಭಾಷೆ ಕೊಡವ ತಕ್ಕ್ ಅನ್ನು 8ನೇ ಶೆಡ್ಯೂಲ್ಗೆ ಸೇರಿಸಬೇಕು. ಸಂವಿಧಾನದ 347, 350, 350ಎ ಮತ್ತು 350ಬಿ ವಿಧಿಗಳ ಅಡಿಯಲ್ಲಿ ಪಠ್ಯಕ್ರಮ ಮತ್ತು ಆಡಳಿತದಲ್ಲಿ ಕೊಡವ ತಕ್ಕ್ ಅನ್ನು ಪರಿಚಯಿಸಬೇಕು. ಕೊಡವ ತಕ್ಕ್ ಅನ್ನು ರಾಜ್ಯದ 3ನೇ ಆಡಳಿತ ಭಾಷೆಯನ್ನಾಗಿ ಪರಿಗಣಿಸಬೇಕು.
ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಜಾನಪದ ಪರಂಪರೆಯನ್ನು ಜೀವಂತಗೊಳಿಸಲು, ವಿಶ್ವ ಕೊಡವಾಲಜಿ (ಕೊಡವ ಶಾಸ್ತçದ ಜಾಗತಿಕ ಸಂಶೋಧನಾ ಅಧ್ಯಯನ ಕೇಂದ್ರ) ಸಂಶೋಧನಾ ಕೇಂದ್ರ ಮತ್ತು ಕೊಡವ ಸುಧಾರಿತ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಸರ್ಕಾರವು ನಮಗೆ ಭೂಮಿಯನ್ನು ನೀಡಬೇಕು.
ಜೀವನದಿ ಕಾವೇರಿಗೆ “ಕಾನೂನು ವ್ಯಕ್ತಿ ಸ್ಥಿತಿಯೊಂದಿಗೆ ಜೀವಂತ ಘಟಕವನ್ನು ನೀಡಬೇಕು. ಕಾವೇರಿಯು ವೇದ ಕಾಲದ 7 ಪವಿತ್ರ ನದಿಗಳಲ್ಲಿ ಒಂದಾಗಿದೆ. ಜಲದೇವತೆ ಕಾವೇರಿಯ ಜನ್ಮಸ್ಥಳವನ್ನು ಸರ್ಕಾರವು ಪೂಜ್ಯ ಭಾವನೆಯಿಂದ ಗೌರವಿಸಬೇಕು. ಯಹೂದಿ ಜನರ ಮೌಂಟ್ ಮೊರೈಯಾ ದೇವನೆಲೆ ಮಾದರಿಯಲ್ಲಿ ಕೊಡವ ಜನಾಂಗದ ಪವಿತ್ರ ತೀರ್ಥಯಾತ್ರ ಕೇಂದ್ರವಾಗಿ ತಲಕಾವೇರಿಯನ್ನು ಪರಿಗಣಿಸಬೇಕು.
ಕಾವೇರಿ ನೀರಿನ 740 ಟಿಎಂಸಿ ವಾರ್ಷಿಕ ಇಳುವರಿಯಲ್ಲಿ, ಕೊಡವ ನೆಲದ ಪಾಲು 200 ಟಿಎಂಸಿ ಗಿಂತ ಹೆಚ್ಚು ಆಗಿದೆ. 1966 ರ ಹೆಲ್ಸಿಂಕಿ ನಿಯಮದ ಪ್ರಕಾರ ಕಾವೇರಿಯ ಪುಮುಖ ನೀರಿನ ಪಾಲನ್ನು ಕೊಡಗಿನಲ್ಲಿ ಬಳಸಿಕೊಳ್ಳುವಂತಾಗಬೇಕು.
ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿನ ಅರಮನೆಯ ಸಂಚಿನಲ್ಲಿನ ಘಟಿಸಿದ ಅಮಾಯಕ ಕೊಡವರ ರಾಜಕೀಯ ಹತ್ಯೆಗಳ ನೆನಪಿನ ಸ್ಮಾರಕಗಳನ್ನು ಸ್ಥಾಪಿಸಬೇಕು. ಕೊಡವ ಶೌರ್ಯವನ್ನು ಪ್ರತಿಬಿಂಬಿಸುವ ಉಲುಗುಲಿ-ಸುಂಟಿಕೊಪ್ಪ ಮತ್ತು ಮುಳ್ಳುಸೋಗೆಯಲ್ಲಿ ಕೊಡವರ ಯುದ್ಧ ಸ್ಮಾರಕಗಳನ್ನು ಸ್ಥಾಪಿಸಬೇಕು. ದೇವಾಟ್ ಪರಂಟ್ ನಲ್ಲಿ ಅಂತರರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕಗಳನ್ನು ನಮ್ಮ ಸಂವಿಧಾನದ 49 ವಿಧಿ ಅಡಿಯಲ್ಲಿ ಮತ್ತು 1964 ರ ವೆನಿಸ್ ಘೋಷಣೆ ಯಂತೆ ನಿರ್ಮಿಸಬೇಕು. ಈ ಎರಡೂ ದುರಂತಗಳನ್ನು ವಿಶ್ವ ರಾಷ್ಟ್ರ ಸಂಸ್ಥೆಯ (ಯು.ಎನ್.ಓ) ಹತ್ಯಾಕಾಂಡದ ಸ್ಮರಣಾರ್ಥ ಪಟ್ಟಿಯಲ್ಲಿ ಸೇರಿಸಬೇಕು.
ದೇವಟ್ ಪರಂಬು ಪ್ರಾಚೀನ ಯುದ್ಧಭೂಮಿಯಾಗಿದೆ ಮತ್ತು ಇದು ಕೊಡವ ಜನಾಂಗದ ದೇಶ ಮಂದ್ ಆಗಿದೆ. ಪ್ರಾಚೀನ ಯುದ್ಧಭೂಮಿಗಳಾದ ಕುರುಕ್ಷೇತ್ರ, ಕಳಿಂಗ ಮತ್ತು ವಾಟರ್ಲ್ಲೂ ಗಳನ್ನು ಪಾರಂಪರಿಕ ತಾಣಗಳಾಗಿ ರಕ್ಷಿಸಿದ ಮಾದರಿಯಲ್ಲೇ ಅವುಗಳಿಗೆ ಸಮಾನ ಪ್ರಾಮುಖ್ಯತೆಯಾಗಿ ಸಂರಕ್ಷಿಸಬೇಕು.
ಜನಸಂಖ್ಯಾ ಬದಲಾವಣೆಯನ್ನು/ ಪಲ್ಲಟವನ್ನು ತಡೆಗಟ್ಟಲು, ನಮ್ಮ ಆನುವಂಶಿಕ ಸಮುದಾಯ ಆಸ್ತಿಗಳನ್ನು ಮತ್ತು ನಮ್ಮ ಆಧ್ಯಾತ್ಮಿಕ ಪಾರಮಾರ್ಥಿಕ ನೆಲೆಗಳಾದ ಮಂದ್, ದೇವಕಾಡ್, ತೂಟ್ಂಗಲ, ಕ್ಯಾಕೊಳ ಗಳನ್ನು ರಕ್ಷಿಸಬೇಕು. ಕೊಡವರ ಜನ್ಮ ಭೂಮಿಯಲ್ಲಿ ನಮ್ಮ ಐತಿಹಾಸಿಕ ನಿರಂತರತೆಗೆ ಶಾಸನಬದ್ಧ ಅನುಮೋದನೆಗಾಗಿ, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನ ಮಾದರಿಯಲ್ಲಿ ಇನ್ನರ್ ಲೈನ್ ರ್ಮಿಟ್ ಅನ್ನು ನೀಡಬೇಕು.
ಹೊಸ ಸಂಸತ್ತಿನಲ್ಲಿ ಕೊಡವ ಪ್ರಾತಿನಿಧ್ಯವನ್ನು ನೀಡಬೇಕು. ಕೇಂದ್ರ ವಿಸ್ತಾ 9 ಡಿಸೆಂಬರ್ 1946 ರಿಂದ 24 ಜನವರಿ 1950 ರವರೆಗೆ, ಕೊಡವ ಜನಾಂಗದ ಸದಸ್ಯರು ಭಾರತದ ಸಂವಿಧಾನ ಸಭೆಯಲ್ಲಿ ಕೂರ್ಗ್/ ಕೊಡವ ಪ್ರಾಂತ್ಯವನ್ನು ಪ್ರತಿನಿಧಿಸಿದ್ದರು. ಈಗ ಮತ್ತೆ ಕೊಡವರಿಗೆ ಅವಕಾಶ ನೀಡಬೇಕು ಎಂದು ನಾಚಪ್ಪ ಆಗ್ರಹಿಸಿದರು.
ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಕೋವಿಯೊಂದಿಗೆ ಪಾಲ್ಗೊಂಡಿದ್ದ ಕೊಡವ, ಕೊಡವತಿಯರು ಮಾನವ ಸರಪಳಿಯನ್ನು ರಚಿಸಿದರು. ಸೂರ್ಯ-ಚಂದ್ರ, ಮಾತೃ ಭೂಮಿ, ದೈವಿಕ ವಸಂತ ಕಾವೇರಿ, ಸಂವಿಧಾನ ಮತ್ತು ಗುರು- ಕರೋಣ ಹೆಸರಿನಲ್ಲಿ ಸಿಎನ್ಸಿ ಯ ಕೊಡವ ಲ್ಯಾಂಡ್ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಅಪ್ಪುಮಣಿಯಂಡ ಗೌರಿ, ಅಪುö್ಪಮಣಿಯಂಡ ಶೈಲ, ನಂದಿನೆರವಂಡ ಪಾರ್ವತಿ, ಅಪ್ಪುಮಣಿಯಂಡ ಎಂ.ರಘು ಸುಬ್ಬಯ್ಯ, ಕೈಬುಲೀರ ಅಯ್ಯಪ್ಪ, ಮಲೆಯಂಡ ಕುಟ್ಟಪ್ಪ, ಅಪ್ಪುಮಣಿಯಂಡ ಬನ್ಸಿ ಭೀಮಯ್ಯ, ಮಲೆಯಂಡ ಈರಪ್ಪ, ಮಲೆಯಂಡ ಎಂ.ವಿಜು ಅಪ್ಪಚ್ಚ, ಅಲ್ಲಾರಂಡ ಸತೀಶ್, ಕೋಟೆರ ಕಿರಣ್, ಮಲೆಯಂಡ ವಿಜು, ಬಾಳೆಯಡ ತಿಮ್ಮಯ್ಯ, ಅಪ್ಪುಮಣಿಯಂಡ ಕಿಶು ಮೇದಪ್ಪ, ಮಣವಟ್ಟೀರ ಎಂ.ಪಾಪು, ಮಂಡೀರ ನಂಜಪ್ಪ, ಚಿಯಕಪೂವಂಡ ನವೀನ್ ನಾಚಪ್ಪ, ಮಲೆಯಂಡ ಕೌಶಿಕ್, ಚಿಯಕಪೂವಂಡ ಸುಜಾ ಪೆಮ್ಮಯ್ಯ, ನಾಪನೆರವಂಡ ಬಸಪ್ಪ, ಚಿಯಕಪೂವಂಡ ಉಮೇಶ್, ಮಲೆಯಂಡ ಅಯ್ಯಪ್ಪ, ದೇವತಕ್ಕ ನಾಪನೆರವಂಡ ಪೊನ್ನಪ್ಪ, ನೆಲಜಿ ನಾಡ್ ತಕ್ಕ ಬದ್ದಂಜೆಟ್ಟಿರ ನಾಣಯ್ಯ, ಕಲಿಯಂಡ ಪ್ರಕಾಶ್, ಅರೆಯಡ ಗಿರೀಶ್ ಮತ್ತಿತರರು ಪಾದಯಾತ್ರೆ ಹಾಗೂ ಜನಜಾಗೃತಿ ಸಭೆಯಲ್ಲಿ ಪಾಲ್ಗೊಂಡಿದ್ದರು.
Breaking News
- *ಮಡಿಕೇರಿ : ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಬಹುಮಾನ ವಿತರಣಾ ಸಮಾರಂಭ*
- ಕುಶಾಲನಗರ ಕನ್ನಡ ಭಾರತಿ ಕಾಲೇಜಿನಲ್ಲಿ ಅಕ್ಷರ ಜ್ಯೋತಿ ಯಾತ್ರೆ ಕುರಿತು ಉಪನ್ಯಾಸ : ವಿದ್ಯಾರ್ಥಿಗಳಲ್ಲಿ ಉತ್ತರ ಪ್ರೇರಣೆ, ಸ್ಫೂರ್ತಿ ಬೆಳೆಸಬೇಕು : ಬಸವಕುಮಾರ್ ಪಾಟೀಲ್*
- *ಶ್ರದ್ಧಾಭಕ್ತಿಯಿಂದ ಜರುಗಿದ ಅರಪಟ್ಟು ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಹಾಪೂಜೆ*
- *ಜಯ ಹೇ ಕರ್ನಾಟಕ ಮಾತೆ ಗೀತೆಗೆ 100 ವರ್ಷ : ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು*
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*