ಸುಂಟಿಕೊಪ್ಪ, ನ.13: ಭಾರತದ ಸಂವಿಧಾನದ ಅಡಿಯಲ್ಲಿ ನಾವೆಲ್ಲಾರೂ ಒಂದು ಎಂಬ ಸಮಾನತೆ ಸೂತ್ರದಡಿಯಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡು ಸಾಮರಸ್ಯ ಬದುಕನ್ನು ಕೊಡಗಿನಲ್ಲಿ ಹಿಂದೂ ಮಲಯಾಳಿ ಸಮಾಜ ಆಗ್ರ ಸ್ಥಾನದಲ್ಲಿದೆ ಎಂದು ಕೊಡಗು ಜಿ.ಪಂ ಮಾಜಿ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ.ವಿಜಯ ಹೇಳಿದರು.
ಕಾನ್‍ಬೈಲ್ ಸರ್ಕಾರಿ ಮಾದರಿ ಶಾಲೆಯಲ್ಲಿ ನಾಕೂರು ಶಿರಂಗಾಲ ಗ್ರಾ.ಪಂ ವ್ಯಾಪ್ತಿಯ ಹಿಂದೂ ಮಲಯಾಳಿ ಸಮಾಜದ ವತಿಯಿಂದ 2ನೇ ವರ್ಷದ ಓಣಂ ಆಚರಣೆಯ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ 14 ಕಡೆಗಳಲ್ಲಿ ಹಿಂದೂ ಮಲಯಾಳಿ ಸಮಾಜದ ಶಾಖೆಗಳು ಇದ್ದು, ಕೂಲಿ ಕಾರ್ಮಿಕರಿಂದ ಹಿಡಿದು ಅತ್ಯಲ್ಪ ಸಂಖ್ಯೆಯಲ್ಲಿ ಶ್ರೀಮಂತರು ನಮ್ಮ ಸಮಾಜದಲ್ಲಿದ್ದು, ಅಚಾರ ವಿಚಾರಗಳು ಹಬ್ಬ ಹರಿದಿನಗಳನ್ನು ನಾವೆಲ್ಲಾರೂ ಒಂದಾಗಿ ಆಚರಿಸುತ್ತಿರುವುದು ವೈಶಿಷ್ಟ್ಯ ಪೂರ್ಣ ಅಂಶವೆಂದು ಬಣ್ಣಿಸಿದರು.
ಸಾಮಾನ್ಯವಾಗಿ ಹಬ್ಬ ಹರಿದಿನಗಳಿಗೆ ಶುಭಸಮಾರಂಭಗಳಿಗೆ ನಾವೆಲ್ಲಾರೂ ನಮ್ಮ ಕೈಲಾದ ಸಹಾಯವನ್ನು ಮಾಡುತ್ತೇವೆ ಆದರೆ ಯಾರಿಗೂ ಸಾವು ಯಾವಾಗ ಸಂಭವಿಸುತ್ತದೆ ಎಂಬುದು ಗೊತ್ತಿರುವುದಿಲ್ಲ ಇಲ್ಲಿನ ಸಮಾಜದ ಸದಸ್ಯರು ಸಮುದಾಯದಲ್ಲಿ ಸಾವು ಸಂಭವಿಸಿದಾಗ ರೂ ಹತ್ತು ಸಾವಿರದವರೆಗೆ ಧನ ಸಹಾಯ ಮಾಡುತ್ತಿರುವುದು ವಿಶೇಷವಾಗಿದೆ ಎಂದು ವಿ.ಎಂ.ವಿಜಯ ಶ್ಲಾಘಿಸಿದರು.
ಮಕ್ಕಳಿಗೆ ಪಿಯುಸಿ ಅಥವಾ ಪದವಿ ವಿದ್ಯಾಭ್ಯಾಸವನ್ನು ನೀಡಿ ಮೊಟಕುಗೊಳಿಸಬೇಡಿ ಉನತ ಶಿಕ್ಷಣ ಕೊಡಿಸಲು ಮೊದಲ ಆದ್ಯತೆ ನೀಡಿ ಅದರಿಂದ ಸಮಾಜದ ಏಳಿಗೆ ಸುಲಭ ಸಾಧ್ಯವಾಗುತ್ತದೆ ಎಂದು ಕರೆ ನೀಡಿದ ಅವರು ಮಕ್ಕಳಿಗೆ ಸಂಸ್ಕಾರ ಕಲಿಸಿ, ಮೊಬೈಲ್ ಗೀಳಿನಿಂದ ದೂರವಿಡಿ ಎಂದು ಅವರು ಕರೆ ನೀಡಿದರು.
ನಾಕೂರು ಶಿರಂಗಾಲ ಗ್ರಾ.ಪಂ.ಅಧ್ಯಕ್ಷ ಮಂದೋಡಿ ಜಗನ್ನಾಥ್ ಮಾತನಾಡಿ ನಮ್ಮ ಗ್ರಾಮದಲ್ಲಿ ಹಿಂದೂ ಮಲಯಾಳಿ ಸಂಘದವರು ಅವರ ಸಂಸ್ಕೃತಿ ಸಂಪ್ರಾದಾಯದ ವೈಭವನ್ನು ಅನಾವರಣಗೊಳಿಸಿದ್ದು ಪ್ರತಿಯೊಬ್ಬರಿಗೂ ಇದಿ ಮಾರ್ಗದರ್ಶಿ ಎಂದು ಹೇಳಿದರಲ್ಲದೆ ಮಕ್ಕಳು ಹಿರಿಯರು ಎನ್ನದೆ ಎಲ್ಲಾರೂ ಮೊಬೈಲ್ ದಾಸರಾಗಿದ್ದು, ಅದನ್ನು ಬಿಟ್ಟು ಧಾರ್ಮಿಕ ಆಚರಣೆ ಹೆಚ್ಚು ಒಲವು ತೋರಬೇಕೆಂದರು.
ಕಲ್ಲೂರು ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಮೆರವಣಿಗೆ ಗ್ರಾಮ ಪಂಚಾಯಿತಿ ಸದಸ್ಯೆ ರಾಧಾಮಣಿ ಹಳದಿ ಧ್ವಜವನ್ನು ಹಿಡಿದು ಚಾಲನೆ ನೀಡಿದರು. ಚಂಡೆ ಮೇಳದೊಂದಿಗೆ ಮಹಿಳೆಯರು ಕೇರಳದ ಸೆಟ್ ಮುಂಡು ಸೀರೆ,ಪುರುಷರು ಬಿಳಿ ಪಂಚೆ ಶರ್ಟ್ ಧರಿಸಿದ್ದು ತಾಲ ಹಿಡಿದು ಮಾಮೆಲಿ ವೇಷದಾರಿಯೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಸಾಗಿ ಕಾನ್ ಬೈಲ್ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸಾಗಿ ಬಂದರು.
ಕಾನ್‍ಬೈಲ್ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾದ್ಯಾಯ ಮತ್ತು ಪ್ರಾಭರ ಬಿಇಓ ಎಂ.ವಿ.ಮಂಜೇಶ್ ಎಂ.ಎ. ಮಜೇರ್ಶ ಮಾತನಾಡಿ ವiಲಯಾಳಿ ಸಮಾಜದವರು ಜೀವನೋಪಾಯಕ್ಕಾಗಿ ದೇಶವ್ಯಾಪಿ ನೆಲೆಸಿದ್ದಾರೆ ಆದರೆ ತಾವು ಇದ್ದಲೆ ತಮ್ಮ ಆಚಾರ ವಿಚಾರಗಳನ್ನು ಮರೆಯದೆ ಆಚರಿಸುತ್ತಿದ್ದಾರೆ ಅವರ ಶ್ರದ್ಧೆ, ಧೃಢತೆ ಮತ್ತು ಶ್ರಮಜೀವನದಿಂದಾಗಿ ಇಂದು ಚಂದ್ರಲೋಕದವರೆಗೂ ಅವರೇ ಮೊದಲು ತಲುಪುತ್ತಾರೆ ಎಂಬ ಮಾತಿಗೆ ಉದಾಹರಣೆಯಾಗಿ ನಿಂತಿದ್ದಾರೆಂದು ಮಂಜೇಶ್ ಹೇಳಿದರು.
ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ.ವಸಂತ್‍ಕುಮಾರ್ ಮಾತನಾಡಿ ಹಿಂದೂ ಮಲಯಾಳಿ ಸಮುಧಾಯ ಎಲ್ಲಾ ಜಾತಿ ಸಮುದಾಯದ ಜನರೊಂದಿಗೆ ಒಂದಾಗಿ ಹೋಗುವವರು ಈ ಕಾರಣದಿಂದಲೇ ಅವರು ನಮ್ಮನ್ನು ಕೂಡ ಅವರ ಧಾರ್ಮಿಕ ವಿಚಾರ ಹಬ್ಬ ಹರಿದಿನಗಳಲ್ಲಿ ನಮ್ಮನ್ನು ಆಹ್ವಾನಿಸುತ್ತಾರೆ ಆದರೆ ನಾವು ನಮ್ಮ ಹಬ್ಬ ಹರಿದಿನಗಳಲ್ಲಿ ಅವರನ್ನು ಕರೆಯದೆ ಸ್ವಾರ್ಥ ಮನೋಬಾವನೆಯನ್ನು ಪ್ರದರ್ಶಿಸುತ್ತೇವೆ ಎಂದು ವಿಷಾಧಿಸಿದರು.
ಸಮಾರಂಭದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಬಿ.ಜಿ.ರಮೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ರಂಜನಿ ಕುಂಞಕೃಷ್ಣ, ಸಭೆಯ ಅಧ್ಯಕ್ಷತೆಯನ್ನು ನಾಕೂರು ಶಿರಂಗಾಲ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಕೆ.ಗಂಗಾಧರ್ ವಹಿಸಿ ಮಾತನಾಡಿದರು.
ಸೋಮವಾರಪೇಟೆ ತಾಲೂಕು ಮಲಯಾಳಿ ಸಮಾಜ ಸ್ಥಾಪಕ ಅಧ್ಯಕ್ಷ ಪಿ.ಡಿ.ಪ್ರಕಾಶ್, ನಾಕೂರು ಶಿರಂಗಾಲ ಗ್ರಾ.ಪಂ ಉಪಾಧ್ಯಕ್ಷ ಬಿ.ಇ.ಸತೀಶ್, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೂಳಪ್ಪ ಕೂತಿನ, ನಾಕೂರು ಕೊಡವ ಕೂಟ ಉಪಾಧ್ಯಕ್ಷ ಕೆ.ಎ.ಕಾರ್ಯಪ್ಪ, ನಾಕೂರುಶಿರಂಗಾಲ ಗೌಡ ಸಂಘದ ಅಧ್ಯಕ್ಷ ಎಂ.ಎಂ.ಕಾರ್ಯಪ್ಪ, ಮಳೂರು ಬೆಳ್ಳರಿಕಮ್ಮ ದೇವಸ್ಥಾನ ಅಧ್ಯಕ್ಷ ಕೆ.ಪಿ.ಬೋಪಯ್ಯ, ಬೆಳ್ಳರಿಕಮ್ಮ ದೇವಸ್ಥಾನ ಕಾರ್ಯದರ್ಶಿ ಎಂ.ಎನ್.ಲೋಹಿತಾಶ್ವ, ನಾಕೂರು ಗಂಗಾಧರೇಶ್ವ ದೇವಸ್ಥಾನ ಅಧ್ಯಕ್ಷ ಎಲ್.ಎಂ.ರುದ್ರಪ್ಪ, ನಾಕೂರು ಫ್ರೆಂಡ್ಸ್ ಯೂತ್ ಕ್ಲಬ್ ಅಧ್ಯಕ್ಷ ಎ.ಬಿ.ಚಂದ್ರಶೇಖರ್, ಸುಂಟಿಕೊಪ್ಪ ಹೋಬಳಿ ಜೈಜವಾನ್ ಮಾಜಿ ಸೈನಿಕರ ಟ್ರಸ್ಟ್ ಅಧ್ಯಕ್ಷ ಪಿ.ಜಿ.ಶ್ರೀನಿವಾಸ್,ಪಂಚಾಯಿತಿ ಮಾಜಿ ಕಾರ್ಯದರ್ಶಿ ಸುರೇಶ್, ಗ್ರಾ. ಪಂ. ಮಾಜಿ ಸದಸ್ಯ ಚೋಮಣಿ, ಕಾಫಿ ಬೆಳೆಗಾರರಾದ ಕರವಂಡ ಕುಂಞಯಪ್ಪ,ಕುಶಾಲನಗರ ಕ್ರೈಂ ಪೊಲೀಸ್ ಸಜಿ, ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷ ಕಿಟ್ಟಣರೈ ಮತ್ತಿತರರು ಇದ್ದರು.
ಸಮಾರಂಭಕ್ಕೂ ಮುನ್ನ ಕಲ್ಲೂರು ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಸಮುದಾಯ ಭಾಂದವರು ಮಹಿಳೆಯರು ಕೇರಳದ ಸಾಂಪ್ರಾದಾಯಿಕ ಶ್ವೇತ ವಸ್ತ್ರಧಾರಿಗಳಾಗಿ,ಪುರುಷರು ಬಿಳಿ ಪಂಚೆ ಶರ್ಟ್ ಧರಿಸಿದ್ದು ಮಹಿಳೆಯರು ತಾಲ ಹಿಡಿದು, ಮಾವೆಲಿ ವೇಷದಾರಿ ಹಾಗೂ ಚಂಡೆ ಮೇಳದೊಂದಿಗೆ, ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಸಾಗಿ ಕಾನ್‍ಬೈಲ್ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸಮಾವೇಶಗೊಂಡಿತು.
ಮೆರವಣಿಗೆಯ ಉದ್ಘಾಟನೆಯನ್ನು ನಾಕೂರು ಶಿರಂಗಾಲ ಗ್ರಾ.ಪಂ ಸದಸ್ಯೆ ರಾಧಮಣಿ ಚಾಲನೆ ನೀಡಿದರು.
ಇದೇ ಸಂದರ್ಭ ಓಣಂ ಹಬ್ಬದ ದಿನ ಮನೆಗಳಲ್ಲಿ ವಿಶೇಷ ರೀತಿಯ ಭೋಜನವನ್ನು ತಯಾರಿಸಲಾಗುತ್ತಿದ್ದು, ವಿವಿಧ ಬಗೆಯ ಖಾದ್ಯಗಳಿಂದ ತಯಾರಿಸಿ ಭೋಜನವನ್ನು ನೇರೆದಿದ್ದ ಜನರಿಗೆ ನೀಡಲಾಯಿತು.
ಹಿಂದೂ ಮಲಯಾಳಿ ಸಮಾಜದ ವತಿಯಿಂದ 2ನೇ ವರ್ಷದ ಓಣಂ ಆಚರಣೆಯ ಅಂಗವಾಗಿ ಮಹಿಳೆಯರು ಪುಷ್ಪ ರಂಗೋಲಿ ಸ್ಪರ್ಧೆ ನಡೆಯಿತು.
ಹಿಂದೂ ಮಲಯಾಳಿ ಸಮಾಜದ ವತಿಯಿಂದ 2ನೇ ವರ್ಷದ ಓಣಂ ಆಚರಣೆಯ ಅಂಗವಾಗಿ ಭಾಂದವರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ನೇರೆದಿದ್ದ ಜನರ ಜನಮನ ಸೂರೆಗೊಳಿಸಿತು.