ಸೂರತ್ ನ.15 : ಬೃಹತ್ ಟ್ಯಾಂಕ್ ವೊಂದನ್ನು ಸ್ವಚ್ಛಗೊಳಿಸಲು ಇಳಿದಿದ್ದ ನಾಲ್ವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಗುಜರಾತ್ ನ ಪಲ್ಸಾನ ಕಡೋದರ ರಸ್ತೆಯಲ್ಲಿರುವ ಮಿಲ್ ವೊಂದರಲ್ಲಿ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಕಾಮರಾಜ್ ಮತ್ತು ಬಾರ್ಡೋಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ನಾಲ್ವರು ಕಾರ್ಮಿಕರ ಮೃತ ದೇಹಗಳನ್ನು ಹೊರತೆಗೆದರು.










