ಪಾಟ್ನಾ ನ.16 : ಮಾಜಿ ಯೋಧರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಇಬ್ಬರು ಆರೋಪಿಗಳನ್ನು ಜನರ ಗುಂಪೊಂದು ಹಲ್ಲೆ ಮಾಡಿ ಕೊಂದು ಹಾಕಿರುವ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ನಡೆದಿದೆ. ಮೃತ ಮಾಜಿ ಯೋಧರನ್ನು ಬಿಜೇಂದ್ರ ಸಿಂಗ್ (55) ಎಂದು ಗುರುತಿಸಲಾಗಿದ್ದು, ಮಿಥಿಲೇಶ್ ಕುಮಾರ್ (23) ಹಾಗೂ ಆದಿತ್ಯ ಕುಮಾರ್ (25) ಜನರ ಗುಂಪಿನಿಂದ ಹತ್ಯೆಗೀಡಾದವರು ಎಂದು ಹೇಳಲಾಗಿದೆ. ಮೂರನೇ ದಾಳಿಕೋರನನ್ನು ಅಜಿತ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಕೂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.










