ಮಡಿಕೇರಿ ನ.23 : ವಿರಾಜಪೇಟೆ ರೋಟರಿ ಸಂಸ್ಥೆಯ ವತಿಯಿಂದ ನಡೆದ ವಿಜ್ಞಾನ ಮಾದರಿ ತಯಾರಿಕ ಸ್ಪರ್ಧೆಯಲ್ಲಿ ರೋಟರಿ ಪ್ರಾಥಮಿಕ ಶಾಲೆ ವಿರಾಜಪೇಟೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಶಾಲೆಯ ಏಳನೇ ತರಗತಿ ವಿದ್ಯಾರ್ಥಿಗಳಾದ ಶ್ರೇಯಸ್, ಲಿಖಿತ, ಎಬಿನ್, ಶ್ರೇಷ್ಠ, ತನ್ ಜಿಮ್ ಭೂಕಂಪದ ಎಚ್ಚರಿಕಾ ಯಂತ್ರವನ್ನು ಸಿದ್ದಪಡಿಸಿ ಪ್ರಥಮ ಬಹುಮಾನ ಪಡೆದುಕೊಂಡರು.
ಮಕ್ಕಳ ಭವಿಷ್ಯ ಉಜ್ವಲವಾಗಲೆಂದು ಶಾಲಾ ಆಡಳಿತ ಮಂಡಳಿ, ಶಾಲಾ ಮುಖ್ಯೋಪಾಧ್ಯಾಯರಾದ ವಿಶಾಲಾಕ್ಷಿ, ಶಿಕ್ಷಕರು ಹಾಗೂ ಪೋಷಕರು ಹಾರೈಸಿದ್ದಾರೆ.









