ಮಡಿಕೇರಿ ನ.23 : ಮಾಯಮುಡಿ ಗ್ರಾಮ ಪಂಚಾಯತ್, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮುದಾಯ ಹಾಗೂ ಅಕ್ಷರ ಪೌಂಡೇಶನ್ ವತಿಯಿಂದ ಗ್ರಾ.ಪಂ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧೆ ನಡೆಯಿತು.
ಮಾಯಮುಡಿ ಗ್ರಾ.ಪಂ ಅಧ್ಯಕ್ಷ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಾವು ಸ್ಪರ್ಧಾತ್ಮಕ ಯುಗದಲ್ಲಿದ್ದು, ಮಕ್ಕಳು ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬೇಕು. ಕಷ್ಟಪಟ್ಟು ಓದುವುದರಿಂದ ಯಾವುದೇ ಪ್ರಯೋಜನವಿಲ್ಲ, ಇಷ್ಟಪಟ್ಟು ಓದಿ ಗುರಿಯನ್ನು ತಲುಪಬೇಕು ಮತ್ತು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವಿ ಮೆಟ್ಟಲಕೋಡ್ ಶಾಲಾ ಮುಖ್ಯೋಪಾದ್ಯಾಯರಾದ ಸೋಪಿಯಾ, ಪರೀಕ್ಷಾ ಮಾರ್ಗದರ್ಶಕರಾದ ಅದೇಂಗಡ ಶೋಭಾ, ಶಿಕ್ಷಕರಾದ ಡಿ.ಯು.ರಾಗಿಣಿ, ಸುಮಿತ ರವಿ, ನಳಿನಿ, ಎಂ.ಟಿ.ಸತ್ಯ, ಪಿ.ವಿ.ಲಾಯ್ದ, ಎಂ.ಕೆ.ಲೀಲ ಉಪಸ್ಥಿತರಿದ್ದರು.
ಗಣಿತ ಸ್ಪರ್ಧೆಯಲ್ಲಿ ರುದ್ರಬೀಡು ಹಿರಿಯ ಪ್ರಾಥಮಿಕ ಶಾಲೆ, ಚನ್ನಂಗೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.
::: ವಿಜೇತರು :::
4ನೇ ತರಗತಿ ವಿಭಾಗದಲ್ಲಿ ವಿ.ಎ.ಹಜನಾಶ್ ಪ್ರಥಮ, ಪಿ.ಎಂ.ಶಶಾಂತ್ ದ್ವಿತೀಯ, ಎನ್.ಜಿ.ವರುಣ್ ತೃತೀಯ ಬಹುಮಾನ ಪಡೆದರು.
5ನೇ ತರಗತಿ ವಿಭಾಗದಲ್ಲಿ ಸಿ.ಸಾನಿಯಾ, ಹೆಚ್.ಡಿ.ಭುವನ್ ಪ್ರಥಮ, ಪಿ.ವಿ.ಕುಶಿಲ್ ದ್ವಿತೀಯ, ಪಿ.ಜಿ.ಕೆರೋಲಿನ್ ತೃತೀಯ ಬಹುಮಾನ ಗೆದ್ದುಕೊಂಡರು.
6ನೇ ತರಗತಿ ವಿಭಾಗದಲ್ಲಿ ಪಿ.ಆರ್.ವೀಕ್ಷ ದೇಚಮ್ಮ ಪ್ರಥಮ, ಸಿ.ಎಂ.ಜಯಿಸನ್ ದ್ವಿತೀಯ, ಹೆಚ್.ನಾಗೇಶ್ ತೃತೀಯ ಸ್ಥಾನ ಪಡೆದರು.









