ಸುಂಟಿಕೊಪ್ಪ, ನ.28: ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದು ಪೋಷಕರ ಗುರಿ ಮತ್ತು ಉದ್ದೇಶವಾಗಿರಲೆಂದು ಎಂಎಸ್ಸಿ ಪದವಿಯಲ್ಲಿ ಚಿನ್ನದ ಪದಕ ಪಡೆದ ಶೈನಿ ಡಿಸೋಜ ಕಿವಿಮಾತು ಹೇಳಿದ್ದಾರೆ.
ಯೂತ್ ಫೇಡರೇಷನ್ ಕ್ಲಬ್ ಹಾಗೂ ಗ್ರಾಮಸ್ಥರ ವತಿಯಿಂದ 7ನೇ ಮೈಲಿನಲ್ಲಿ ನಡೆದ ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ತಾವು ತನ್ನ ಬಾಲ್ಯದ ಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣವನ್ನು ಸುಂಟಿಕೊಪ್ಪದಲ್ಲಿ ಪಡೆದಿದ್ದು, ದಿನ ನಿತ್ಯದ ಓಡಾಟದ ನಡುವೆಯು ತಂದೆತಾಯಿಗಳ ಪ್ರೋತ್ಸಾಹ ಗುರು ಹಿರಿಯರ ಒತ್ತಾಸೆಯಿಂದ ನಾನು ಈ ಹಂತಕ್ಕೆ ಬೆಳೆದಿದ್ದೇನೆ. ನಿಮ್ಮೆಲ್ಲಾರ ಪ್ರೀತಿ ವಿಶ್ವಾಸ ಮತ್ತು ಅಭಿಮಾನಕ್ಕೆ ತಾನು ಚಿರಋಣಿ ಎಂದು ಭಾವುಕರಾಗಿ ಶೈನಿ ಡಿಸೋಜ ನುಡಿದರು.
ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಗಮನಹರಿಸಬೇಕು ಮಕ್ಕಳ ಉನ್ನತ ವಿದ್ಯಾಭ್ಯಾಸದ ಕಡೆಗೆ ಪೋಷಕರು ಗಮನ ಹರಿಸವಂತಾಗಬೇಕು ಎಂದು ಕರೆ ನೀಡಿದರು.
ಯೂತ್ ಫೇಡರೇಷನ್ ಕ್ಲಬ್ ಮತ್ತು ಗ್ರಾಮಸ್ಥರು ಹಾಗೂ ಪೋಷಕರಾದ ಗ್ಯಾಬ್ರಿಯಲ್ ಡಿಸೋಜ, ಸಿಸಿಲಿಯ ಡಿಸೋಜ ಶಾಲು ಹೊದಿಸಿ ಫಲ ತಾಂಬೂಲ ನೀಡಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭ ಕೆದಕಲ್ ಗ್ರಾ.ಪಂ ಅಧ್ಯಕ್ಷ ಆನಂದ, ಮಾಜಿ ಅಧ್ಯಕ್ಷ ಸೋಮಯ್ಯ, ಮಾಜಿ ಉಪಾಧ್ಯಕ್ಷ ವೆಂಕಪ್ಪ ಕೊಟ್ಯಾನ್, ಯೂತ್ ಫೇಡರೇಷನ್ ಕ್ಲಬ್‍ನ ಸ್ಥಾಪಕ ಅಧ್ಯಕ್ಷ ಕೆ.ಎಂ.ಸತೀಶ್, ಹಾಲಿ ಅಧ್ಯಕ್ಷ ಬಿ.ಆರ್.ಸತೀಶ್, ಪಂಚಾಯಿತಿ ಸದಸ್ಯೆ ಬೀಟಾ ಸೋಮಯ್ಯ, ಮನೋಜ್, ಪಿ.ಸಿ.ಮಣಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*