ಮಡಿಕೇರಿ ನ.28 : ಕೊಡಗಿನ ಸಾಂಪ್ರದಾಯಿಕ ಸುಗ್ಗಿ ಹಬ್ಬವಾದ ಪುತ್ತರಿ ಹಬ್ಬವನ್ನು ನಿಟ್ಟೂರು ಕಾರ್ಮಾಡು ಕಾಲಭೈರವ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ದೇವಾಲಯದ ಭತ್ತದ ಗದ್ದೆಯಲ್ಲಿ ಕದಿರು ತೆಗೆಯುವ ಮೂಲಕ ಧಾನ್ಯಲಕ್ಷ್ಮಿಯನ್ನು ಮನೆಗೆ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.
ಕಾಲಭೈರವ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮೇಚಂಡ ಸೋಮಯ್ಯ, ಉಪಾಧ್ಯಕ್ಷ ಚೀರಂಡ ಸುಬ್ರಮಣಿ, ಕಾರ್ಯದರ್ಶಿ ಕೊಟ್ಟಂಗಡ ಮಧು ಮಂಜುನಾಥ್, ಅರ್ಚಕರಾದ ಸುರೇಶ್ ಭಟ್, ನಿರ್ದೇಶಕರಾದ ತಾಣಚ್ಚೀರ ಲೋಕೇಶ್, ಪಡಿಞರಂಡ ಪ್ರಭು ಕುಮಾರ್, ಪೊನ್ನಿಮಾಡ ಸಂತೋಷ್, ಹೊಟ್ಟೆಂಗಡ ಅಜಿತ್, ಲೋಹಿತ್, ಕಾಡೇಮಾಡ ಪ್ರವೀಣ್, ಪೊನ್ನಿಮಾಡ ತಿಮ್ಮಯ್ಯ, ಕಳ್ಳೇಂಗಡ ಉತ್ತಯ್ಯ, ಕಾಶಿ ವಿವೇಕಾನಂದ, ಪೊನ್ನಿಮಾಡ ಕುಶಾಲಪ್ಪ, ಮಲ್ಲೇಂಗಡ ಶಶಿಮಣಿ, ಕೊಲತಂಡ ಮುತ್ತಪ್ಪ, ಮತ್ತಿತರು ಹಾಜರಿದ್ದರು.