ವಿರಾಜಪೇಟೆ ನ.28 : ವಿರಾಜಪೇಟೆಯ ಚಿಕ್ಕಪೇಟೆ ಬಳಿಯಿರುವ ದೇವರಕಾಡು ರಸ್ತೆಯ ಮಹಾವಿಷ್ಣು ದೇವಾಲಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ತಿಕ ವಿಷ್ಣು ದೀಪೋತ್ಸವ ನಡೆಯಿತು.
ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ದೇವಾಲಯದ ಆವರಣದಲ್ಲಿ ಸತ್ಯನಾರಾಯಣ ದೇವರ ಸಮ್ಮುಖದಲ್ಲಿ ಸಾಮೂಹಿಕವಾಗಿ ಸಂಕಲ್ಪವನ್ನು ಮಾಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಅರ್ಚಕರು ಸತ್ಯನಾರಾಯಣ ದೇವರ ವೃತದ ಕಥೆಯ ವಿವರ ಹಾಗೂ ಮಹತ್ವವನ್ನು ಭಕ್ತರಿಗೆ ತಿಳಿಸಿದರು. ನಂತರ ನೆರೆದಿದ್ದ ಭಕ್ತಾಧಿಗಳಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಜೆ ಕಾರ್ತಿಕ ವಿಷ್ಣು ದೀಪೋತ್ಸವ ನೆರವೇರಿತು.









