ಮಡಿಕೇರಿ ಡಿ.1 : ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವರ್ಷಂಪ್ರತೀ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ ಏರ್ಪಡಿಸುತ್ತದೆ.
ಅಂತೆಯೇ ಈ ಸಾಲಿನಲ್ಲಿ ಡಿಸೆಂಬರ್, 07 ರಂದು ಬೆಳಗ್ಗೆ 10.30 ಗಂಟೆಗೆ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ರಾಷ್ಟ್ರದ ಅರ್ಥವ್ಯವಸ್ಥೆಯ ಬೆಳವಣಿಗೆಗಳಲ್ಲಿ ಸಹಕಾರಿ ವಲಯದ ಪಾತ್ರ’ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ನಡೆಯಲಿದೆ.
ಅಲ್ಲದೆ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ‘ಬಡತನ ನಿರ್ಮೂಲನೆ, ಉದ್ಯೋಗ ಸೃಷ್ಠಿ, ಸಾಮಾಜಿಕ ನ್ಯಾಯ ವಿತರಣೆಗಳು ಸಹಕಾರಿ ವಲಯದಿಂದ ಮಾತ್ರವೇ ಜಾರಿಗೊಳಿಸಲು ಸಾಧ್ಯ’ ವಿಷಯದ ಕುರಿತು ಚರ್ಚಾ ಸ್ಪರ್ಧೆಯು ಡಿ.7 ರಂದು ಬೆಳಗ್ಗೆ 11 ಗಂಟೆಗೆ ಯೂನಿಯನ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಪ್ರಬಂದ ಸ್ಪರ್ಧೆಗೆ ಒಂದು ಶಾಲೆಯಿಂದ ಒಬ್ಬ ವಿದ್ಯಾರ್ಥಿ ಹಾಗೂ ಚರ್ಚಾ ಸ್ಪರ್ಧೆಗೆ ಒಂದು ಶಾಲೆಯಿಂದ ವಿಷಯದ ಪರವಾಗಿ ಒಬ್ಬರು ಮತ್ತು ವಿರುದ್ಧವಾಗಿ ಒಬ್ಬರನ್ನು ಆಯ್ಕೆ ಮಾಡಿ ಕಳುಹಿಸತಕ್ಕದ್ದು. ಹಾಜರಾಗುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರಯಾಣ ದರ ಪಾವತಿಸಲಾಗುವುದು ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಸಿಇಒ ತಿಳಿಸಿದ್ದಾರೆ.









